ಕೇರಳ ರಾಜಕಾರಣಿಗಳಿಗೆ ಅತ್ಯಂತ ಸಂತಸದ ಸುದ್ದಿಯೊಂದು ಲಭ್ಯವಾಗಿದೆ. ಅವರ ಸಂಬಳವನ್ನು ದ್ವಿಗುಣ ಪ್ರಮಾಣದಲ್ಲಿ ಏರಿಕೆ ಮಾಡಲು ಪ್ರಸ್ತಾವನೆ ಇರಿಸಿದ ಬಿಲ್ ಪಾಸ್ ಮಾಡಲಾಗಿದೆ.
ತಿರುವನಂತಪುರಂ : ಕೇರಳ ರಾಜಕಾರಣಿಗಳಿಗೆ ಅತ್ಯಂತ ಸಂತಸದ ಸುದ್ದಿಯೊಂದು ಲಭ್ಯವಾಗಿದೆ. ಅವರ ಸಂಬಳವನ್ನು ದ್ವಿಗುಣ ಪ್ರಮಾಣದಲ್ಲಿ ಏರಿಕೆ ಮಾಡಲು ಪ್ರಸ್ತಾವನೆ ಇರಿಸಿದ ಬಿಲ್ ಪಾಸ್ ಮಾಡಲಾಗಿದೆ.
ಭತ್ಯೆಯನ್ನೂ ಕೂಡ ದ್ವಿಗುಣ ಪ್ರಮಾಣದಲ್ಲಿ ಏರಿಕೆ ಮಾಡಲಾಗುತ್ತಿದೆ. ಇದರಡಿಯಲ್ಲಿ ಸ್ಪೀಕರ್, ಡೆಪ್ಯುಟಿ ಸ್ಪೀಕರ್, ಸಚಿವರು, ಶಾಸಕರು ಹಾಗೂ ವಿರೋಧ ಪಕ್ಷಗಳ ನಾಯಕರೂ ಸೇರಿದ್ದಾರೆ. ಏಪ್ರಿಲ್ 1 ರಿಂದಲೇ ಹೊಸ ಸಂಬಳ ನೀತಿ ಜಾರಿಯಾಗಲಿದೆ.
ಸಚಿವರ ಸಂಬಳದಲ್ಲಿ 55 ಸಾವಿರದಿಂದ 90 ಸಾವಿರದವರೆಗೂ ಕೂಡ ಏರಿಕೆ ಕಂಡು ಬಂದಿದೆ. ಇನ್ನು ಶಾಸಕರ ಸಂಬಳದಲ್ಲಿ 39 ಸಾವಿರದಿಂದ 70 ಸಾವಿರದ ವರೆಗೆ ಏರಿಕೆಯಾಗಿದೆ. ನ್ಯಾಯಮೂರ್ತಿ ಜೆ.ಎಂ ಜೇಮ್ಸ್ ಕಮಿಷನ್ ವರದಿಯನ್ನು ಆಧರಿಸಿ ಈ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ.
