ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದ ಈ ನಾಯಕ ಇದೀಗ ಕಾಂಗ್ರೆಸ್ ನಿಂದ ಔಟ್ ಆಗಿದ್ದಾರೆ. ಹೊಗಳಿದ ಕಾರಣದಿಂದ ಅವರನ್ನು ಉಚ್ಛಾಟಿಸಲಾಗಿದೆ.

ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹೊಗಳಿದ್ದ ಕೇರಳದ ಮಾಜಿ ಸಂಸದ ಎ.ಪಿ. ಅಬ್ದುಲ್ಲಾ ಕುಟ್ಟಿಅವರನ್ನು ರಾಜ್ಯ ಕಾಂಗ್ರೆಸ್‌ ಘಟಕ ಸೋಮವಾರ ಉಚ್ಚಾಟಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗಾಂಧೀಜಿ ಅವರ ಮೌಲ್ಯಗಳನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡ ಕಾರಣಕ್ಕೆ ಮೋದಿ ಅವರು ಜನಪ್ರಿಯರಾಗಿದ್ದಾರೆ. ಇದಕ್ಕೆ ಸ್ವಚ್ಛ ಭಾರತ ಹಾಗೂ ಉಜ್ವಲ ಯೋಜನೆಗಳೇ ಉದಾಹರಣೆ ಎಂದು ಕಣ್ಣೂರಿನ ಮಾಜಿ ಸಂಸದ ಕುಟ್ಟಿಅವರು ಪ್ರಶಂಸೆ ವ್ಯಕ್ತಪಡಿಸಿದ್ದರು. 

ಸಿಪಿಎಂನಿಂದ ಎರಡು ಬಾರಿ ಸಂಸದರಾಗಿದ್ದ ಕುಟ್ಟಿಅವರು, 2009ರಲ್ಲಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಅವರನ್ನು ಹೊಗಳಿ ಆ ಪಕ್ಷದಿಂದ ಉಚ್ಚಾಟನೆಗೊಂಡಿದ್ದರು. ನಂತರ ಕಾಂಗ್ರೆಸ್‌ನಿಂದ 2 ಬಾರಿ ಶಾಸಕರಾಗಿದ್ದರು.