Asianet Suvarna News Asianet Suvarna News

ಕೇಂದ್ರ ಸರ್ಕಾರದಿಂದ ನ್ಯಾಯಾಧೀಶರುಗಳ ದೂರವಾಣಿ ಕದ್ದಾಲಿಕೆ: ಕೇಜ್ರಿವಾಲ್ ಆರೋಪ

ನ್ಯಾಯಾಧೀಶರ ದೂರವಾಣಿ ಸಂಭಾಷಣೆ ಕದ್ದಾಲಿಸಲಾಗುತ್ತಿದೆ ಎಂಬುದು ಸತ್ಯವೇ ಎಂಬ ಬಗ್ಗೆ ಗೊತ್ತಿಲ್ಲ. ಆದರೆ ಇದು ನಿಜವೇ ಆಗಿದ್ದರೆ, ಇದು ತುಂಬಾ ಅಪಾಯಕಾರಿ ಬೆಳವಣಿಗೆ. ಹಾಗಾದರೆ ನ್ಯಾಯಾಂಗಕ್ಕೆ ಸ್ವಾತಂತ್ರ್ಯ ಎಲ್ಲಿಂದ ಸಿಗಬೇಕು ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

Kejriwal Accuses Centre of Phone Tapping of Judges

ನವದೆಹಲಿ (ಅ.31): ನ್ಯಾಯಾಧೀಶರುಗಳ ದೂರವಾಣಿ ಕದ್ದಾಲಿಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರದ ವಿರುದ್ಧ ಗಂಭೀರವಾಗಿ ಆರೋಪಿಸಿದ್ದಾರೆ.

ಏತನ್ಮಧ್ಯೆ ಕೇಜ್ರಿವಾಲ್ ಅವರ ಆರೋಪ ಸಂಪೂರ್ಣ ಸತ್ಯಕ್ಕೆ ದೂರವಾದದ್ದು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಸೋಮವಾರ ತಳ್ಳಿಹಾಕಿದ್ದಾರೆ.

ನ್ಯಾಯಾಧೀಶರ ದೂರವಾಣಿ ಸಂಭಾಷಣೆ ಕದ್ದಾಲಿಸಲಾಗುತ್ತಿದೆ ಎಂಬುದು ಸತ್ಯವೇ ಎಂಬ ಬಗ್ಗೆ ಗೊತ್ತಿಲ್ಲ. ಆದರೆ ಇದು ನಿಜವೇ ಆಗಿದ್ದರೆ, ಇದು ತುಂಬಾ ಅಪಾಯಕಾರಿ ಬೆಳವಣಿಗೆ. ಹಾಗಾದರೆ ನ್ಯಾಯಾಂಗಕ್ಕೆ ಸ್ವಾತಂತ್ರ್ಯ ಎಲ್ಲಿಂದ ಸಿಗಬೇಕು ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ನ್ಯಾಯಾಧೀಶರುಗಳ ನೇಮಕಾತಿಯಲ್ಲಿ ಕೇಂದ್ರ ಸರ್ಕಾರ ಮೂಗುತೂರಿಸುತ್ತಿದೆ ಎಂದು ಆರೋಪಿಸಿರುವ ಕೇಜ್ರಿವಾಲ್, ನ್ಯಾಯಾಧೀಶರುಗಳ ದೂರವಾಣಿ ಕದ್ದಾಲಿಸಲಾಗುತ್ತಿದೆ ಎಂಬ ವಿಷಯವನ್ನು ಕೇಳಿದ್ದೇನೆ. ಆ ನೆಲೆಯಲ್ಲಿ ಅವರು ಮಾತನಾಡಲು ಭಯಪಡುತ್ತಿದ್ದಾರೆ. ಇದು ನಿಜಕ್ಕೂ ತಪ್ಪು, ಇದಕ್ಕೆ ಅವಕಾಶ ಕೊಡಬಾರದು ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios