117 ವಿಧಾನಸಭಾ ಸ್ಥಾನವಿರುವ ಪಂಜಾಬ್'ನಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಅಮ್ ಆದ್ಮಿ ಪಕ್ಷ 42 ರಿಂದ 46 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಯಿದೆ
ನವದೆಹಲಿ(ಅ.13): ದೆಹಲಿಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವ ಅರವಿಂದ್ ಕೇಜ್ರಿವಾಲ್ ಪಂಜಾಬ್'ನಲ್ಲೂ ತಮ್ಮ ಗೆಲುವಿನ ಓಟ ಮುಂದುವರಿಸಲಿದ್ದಾರೆ ಎಂದು ಇಂಡಿಯಾ ಟುಡೇ - ಆ್ಯಕ್ಸಿಸ್ ಚುನಾವಣಾ ಸಮೀಕ್ಷೆ ವರದಿ ಮಾಡಿದೆ.
117 ವಿಧಾನಸಭಾ ಸ್ಥಾನವಿರುವ ಪಂಜಾಬ್'ನಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಅಮ್ ಆದ್ಮಿ ಪಕ್ಷ 42 ರಿಂದ 46 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಯಿದ್ದು, ಕಾಂಗ್ರೆಸ್ 49 ರಿಂದ 55 ಸ್ಥಾನ ಗೆಲ್ಲಲಿದೆಯಂತೆ. ಈ ಮೂಲಕ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. 12 ರಿಂದ 21 ಸ್ಥಾನ ಪಡೆಯುವ ಬಿಜೆಪಿ ಮತ್ತು ಎಸ್ಎಡಿ ಮೂರನೆ ಸ್ಥಾನಕ್ಕೆ ತೃಪ್ತಿ ಪಡೆಯಲಿದ್ದಾರಂತೆ. ಇತರರು 3 ರಿಂದ 7 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಯಿದೆ.
