ಉಸಿರಾಟದ ತೊಂದರೆಯಿಂದ ಡಿಸೆಂಬರ್ 15ರ ರಾತ್ರಿ ಕರುಣಾನಿಧಿ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು.
ಚೆನ್ನೈ(ಡಿ.21): ಡಿಎಂಕೆ ವರಿಷ್ಠ ಕರುಣಾನಿಧಿ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಬಂದಿದ್ದು, ಕಾವೇರಿ ಆಸ್ಪತ್ರೆಯಿಂದ ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆಯಾಗಿದೆ. ಆಸ್ಪತ್ರೆಯಲ್ಲಿ ಕರುಣಾನಿಧಿ ಚೇತರಿಸಿಕೊಂಡಿರುವ ಬಗ್ಗೆ ಆಸ್ಪತ್ರೆಯಿಂದ ಫೋಟೋಗಳೂ ರಿಲೀಸ್ ಆಗಿವೆ. ಕರುಣಾನಿಧಿ ಚೇರ್ ಮೇಲೆ ಕುಳಿತು ಟಿವಿ ನೋಡುತ್ತಿರುವ ದೃಶ್ಯಗಳು ಅವರ ಆರೋಗ್ಯ ಸುಧಾರಿಸಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ಉಸಿರಾಟದ ತೊಂದರೆಯಿಂದ ಡಿಸೆಂಬರ್ 15ರ ರಾತ್ರಿ ಕರುಣಾನಿಧಿ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು.