ಕಣಿವೆಯಲ್ಲಿ ಮಾನ ಹಕ್ಕು ಉಲ್ಲಂಘನೆ?ವಿಶ್ವಸಂಸ್ಥೆ ಪರಿಗಣಿಸದ ಸತ್ಯಗಳೇನು?ಸೇನಾ ವಾಹನದ ಮೇಲೆ ಕಲ್ಲು ತೂರಾಟದ ದೃಶ್ಯರಕ್ಷಣೆಗಾಗಿ ಪರದಾಡುತ್ತಿರುವ ಯೋಧರ ದೃಶ್ಯ
ಶ್ರೀನಗರ(ಜೂ.15): ಕಾಶ್ಮೀರದಲ್ಲಿ ಭಾರತ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ವಿಶ್ವಸಂಸ್ಥೆ ವರದಿ ಮಾಡಿ ವಿವಾದ ಸೃಷ್ಟಿಸಿದೆ. ಈ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಹೌದಾದರೂ, ಈ ವರದಿಯಿಂದ ಕೆಲವರಂತೂ ಖುಷಿಯಾಗಿರುವುದು ಸತ್ಯ.
ಆದರೆ ಕಣಿವೆಯಲ್ಲಿ ಶಾಂತಿ ನೆಲೆಸಲು ತಮ್ಮ ಜೀವವನ್ನೇ ಪಣಕ್ಕಿಟ್ಟು ಶ್ರಮಿಸುತ್ತಿರುವ ಭಾರತೀಯ ಯೋಧರು ಮತ್ತು ಅವರು ಪಡುತ್ತಿರುವ ಕಷ್ಟ ಎಂತದ್ದು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಒದಗಿಸಿದೆ.
ರಸ್ತೆಯಲ್ಲಿ ಹೋಗುತ್ತಿದ್ದಾಗ ಅಚಾನಕ್ಕಾಗಿ ಬೈಕ್ ಗೆ ಭದ್ರತಾ ಪಡೆಗಳ ವಾಹನ ಡಿಕ್ಕಿ ಹೊಡೆದ ಕಾರಣಕ್ಕೆ ಯೋಧರಿದ್ದ ವಾಹನದತ್ತ ಸಾವರ್ವಜನಿಕರು ಕಲ್ಲೆಸೆದ ಘಟನೆ ನಡೆದಿದೆ.
ಇಲ್ಲಿನ ಬನಿಹಾಲ್ ಬಳಿ ಸಿಆರ್‌ಪಿಎಫ್ ವಾಹನವೊಂದು ಅಚಾನಕ್ಕಾಗಿ ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆದಿದೆ. ಆದರೆ ಇದನ್ನೇ ನೆಪ ಮಾಡಿಕೊಂಡ ಸಾವರ್ವಜನಿಕರು ಯೋಧರಿದ್ದ ವಾಹನದತ್ತ ಕಲ್ಲು ತೂರಾಟ ನಡೆಸಿದ್ದಾರೆ. ವಾಹನ ಒಳಗಿದ್ದ ಯೋಧರು ತಮ್ಮ ರಕ್ಷಣೆಗಾಗಿ ಪರದಾಡುತ್ತಿರುವ ದೃಶ್ಯ ಒಂದು ಕ್ಷಣ ದಂಗು ಬಡಿಸುವುದು ಸುಳ್ಳಲ್ಲ.
