Asianet Suvarna News Asianet Suvarna News

ನೀವು ಹೋರಾಡುತ್ತಿರುವ ಸ್ವಾತಂತ್ರ್ಯ ಇದೇನಾ? ಕಾಶ್ಮೀರದಲ್ಲಿ ಡಿಎಸ್'ಪಿ ಹತ್ಯೆಗೆ ಶೋಕ

"ಯಾರೋ ಉಗ್ರನೋ, ಸೈನಿಕನೋ ಅವರನ್ನ ಕೊಲ್ಲಲಿಲ್ಲ. ಜನರ ಗುಂಪು ಹತ್ಯೆ ಮಾಡಿದೆ. ಅವರು ಅಮಾಯಕನನ್ನು ಕೊಂದಿದ್ದಾರೆ. ತಹಜೂದ್ ಗುಜರ್ (ರಾತ್ರಿ ವೇಳೆ ಪ್ರಾರ್ಥಿಸುವವರು)ನನ್ನ ಕೊಂದಿದ್ದಾರೆ" ಎಂದು ಆಯುಬ್ ಪಂಡಿತ್'ನ ಸಂಬಂಧಿಕರು ಬೇಸರ ವ್ಯಕ್ತಪಡಿಸಿದ್ದಾರೆ.

kashmir mob lynching cop incident
  • Facebook
  • Twitter
  • Whatsapp

ಶ್ರೀನಗರ(ಜೂನ್ 23): ನಿನ್ನೆ ತಡರಾತ್ರಿ ಜನರ ಗುಂಪೊಂದು ನಡೆಸಿದ ಹಲ್ಲೆಗೆ ಮೊಹಮ್ಮದ್ ಆಯುಬ್ ಪಂಡಿತ್ ಬಲಿಯಾದ ಘಟನೆ ಇಡೀ ದೇಶಕ್ಕೆ ಆಘಾತ ಮೂಡಿಸಿದೆ. ಡಿಎಸ್'ಪಿ ಪಂಡಿತ್ ಅಂತ್ಯಕ್ರಿಯೆ ವೇಳೆ ಅವರ ಸಹೋದ್ಯೋಗಿಗಳಂತೂ ಅಕ್ಷರಶಃ ಕಣ್ಣೀರು ಹಾಕಿದ್ದಾರೆ. ಮೊಹಮ್ಮದ್ ಆಯುಬ್ ಪಂಡಿತ್ ಅವರ ಸಂಬಂಧಿಕರು ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿನಾಕಾರಣ ಒಬ್ಬ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡುವ ನೀಚ ಮಟ್ಟಕ್ಕೆ ನಾವು ತಲುಪಿಬಿಟ್ಟೆವಲ್ಲಾ ಎಂದು ಪಂಡಿತ್ ಸಂಬಂಧಿಕರು ಶೋಕ ತೋಡಿಕೊಂಡಿದ್ದಾರೆ.

"ಮಸೀದಿಯ ಹೊರಗೆ ವಿನಾಕಾರಣ ಒಬ್ಬ ವ್ಯಕ್ತಿಯನ್ನು ಕೊಲ್ಲುತ್ತೇವೆ ಎಂದರೆ ನಾವು ಯಾವ ಮಟ್ಟಕ್ಕೆ ಇಳಿದುಬಿಟ್ಟಿದ್ದೀವಿ? ಇದನ್ನೆಯಾ ಧರ್ಮ ನಮಗೆ ಕಲಿಸಿರುವುದು?" ಎಂದು ಅವರು ಪ್ರಶ್ನಿಸಿದ್ದಾರೆ.

"ಜನರನ್ನು ಕೊಲ್ಲತೊಡಗಿದ್ದೇವಲ್ಲಾ, ನಾವೂ ಹೋರಾಟ ಮಾಡುತ್ತಿರುವುದು ಈ ಆಜಾದೀ(ಸ್ವಾತಂತ್ರ್ಯ)ಗೆಯಾ? ಇಂಥ ಸ್ವಾತಂತ್ರ್ಯ ಪಡೆದುಕೊಂಡು ಏನು ಮಾಡುವುದು?

"ಯಾರೋ ಉಗ್ರನೋ, ಸೈನಿಕನೋ ಅವರನ್ನ ಕೊಲ್ಲಲಿಲ್ಲ. ಜನರ ಗುಂಪು ಹತ್ಯೆ ಮಾಡಿದೆ. ಅವರು ಅಮಾಯಕನನ್ನು ಕೊಂದಿದ್ದಾರೆ. ತಹಜೂದ್ ಗುಜರ್ (ರಾತ್ರಿ ವೇಳೆ ಪ್ರಾರ್ಥಿಸುವವರು)ನನ್ನ ಕೊಂದಿದ್ದಾರೆ" ಎಂದು ಆಯುಬ್ ಪಂಡಿತ್'ನ ಸಂಬಂಧಿಕರು ಬೇಸರ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios