ಕೆಲ ದಿನಗಳಿಂದ ಸುಮ್ಮನಾಗಿದ್ದ ಉಗ್ರರು ಮತ್ತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಟ್ಟಹಾಸ ಮೆರೆದಿದ್ದಾರೆ. ಭಾರತ ಸೇನೆಯ ವೀರ ಯೋಧನನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ. ಹಿಜ್ಬುಲ್‌ ಕಮಾಂಡರ್‌ ಸಮೀರ್‌ ಟೈಗರ್‌ ನನ್ನು ಹತ್ಯೆಗೈದ ಸೇನಾ ಪಡೆಯಲ್ಲಿ ಔರಂಗಜೇಬ್‌ ಕೆಲಸ ಮಾಡಿದ್ದರು.

ಶ್ರೀನಗರ ಜೂನ್ 15: ಕೆಲ ದಿನಗಳಿಂದ ಸುಮ್ಮನಾಗಿದ್ದ ಉಗ್ರರು ಮತ್ತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಟ್ಟಹಾಸ ಮೆರೆದಿದ್ದಾರೆ. ಭಾರತ ಸೇನೆಯ ವೀರ ಯೋಧರೊಬ್ಬರನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ.

ಗುಂಡಿನ ದಾಳಿಯಿಂದ ಸಂಪೂರ್ಣ ಛಿದ್ರಗೊಂಡ ಯೋಧನ ದೇಹ ಪುಲ್ವಾಮಾ ಜಿಲ್ಲೆಯಲ್ಲಿ ಪತ್ತೆಯಾಗಿದೆ. ರಜೌರಿ ನಿವಾಸಿಯಾಗಿದ್ದ ಯೋಧ ಔರಂಗಜೇಬ್ ರಂಜಾನ್‌ ರಜೆಗಾಗಿ ಮನೆಗೆ ಆಗಮಿಸಿದ್ದರು. ಅವರನ್ನು ಲಾಂಪೋರಾದ ಬಳಿ ಅಪಹರಣ ಮಾಡಲಾಗಿತ್ತು. ಶೋಪಿಯಾನ್‌ನಲ್ಲಿ 44 ರೈಫ‌ಲ್ಸ್‌ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯೋಧ ಉಗ್ರರ ಕೃತ್ಯಕ್ಕೆ ಬಲಿಯಾಗಿದ್ದಾರೆ.

ಪತ್ರಿಕೆ ಸಂಪಾದಕನಿಗೂ ಗುಂಡಿಟ್ಟ ಉಗ್ರರು

ಹಿಜ್ಬುಲ್‌ ಕಮಾಂಡರ್‌ ಸಮೀರ್‌ ಟೈಗರ್‌ ನನ್ನು ಹತ್ಯೆಗೈದ ಸೇನಾ ಪಡೆಯಲ್ಲಿ ಔರಂಗಜೇಬ್‌ ಕೆಲಸ ಮಾಡಿದ್ದರು. ಇದೇ ಕಾರಣಕ್ಕೆ ಔರಂಗಜೇಬ್‌ರನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಅಪಹರಣ ಮಾಡಿದ್ದು ಯಾವಾಗ?
ಶಾಡಿಮಾರ್ಗ್‌ ಸೇನಾ ನೆಲೆಯ ಬಳಿ ಪ್ರಯಾಣಿಕ ವಾಹನವನ್ನೇರಿ ಜೂನ್ 12 ರಂದು ಮನೆ ಕಡೆ ಹೊರಟಿದ್ದರು. ಆದರೆ ಅಲ್ಲಿಂದ ಎರಡು ಕಿಮೀ ದೂರದಲ್ಲಿ ವಾಹನವನ್ನು ತಡೆದ ಉಗ್ರರು ಯೋಧರನ್ನು ಅಪಹರಿಸಿದ್ದರು. ಇದಾದ ಮೇಲೆ ಶೋಧ ಆರಂಭಿಸಿದ್ದರೂ ಸುಳಿವು ಪತ್ತೆಯಾಗಿರಲಿಲ್ಲ. ಆದರೆ ಇದೀಗ ಯೋಧನ ಶವ ಪುಲ್ವಾಮದ ಬಳಿ ಪತ್ತೆಯಾಗಿದೆ.