ಭ್ರಷ್ಟ ಅಧಿಕಾರಿ ಭೀಮಾನಾಯ್ಕ ರಾಜ್ಯದ ಹಲವೆಡೆ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿ ನಾಗೇಶ್ ಎಂಬುವವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಇದಲ್ಲದೇ ಬೇನಾಮಿ ಹೆಸರಿನಲ್ಲಿ ಸಾಕಷ್ಟು ಆಸ್ತಿಖರೀದಿಸಿದ್ದಾರೆ. ಭೀಮಾನಾಯಕ್​ ಬ್ಲ್ಯಾಕ್​ &ವೈಟ್​ ದಂಧೆಯಲ್ಲಿ ತೊಡಗಿದ್ದಾರೆ. ರೆಡ್ಡಿ ಮಗಳ ಮದುವೆಗೂ ಕಪ್ಪು ಹಣ ಬಿಳಿಯಾಗಿಸಿಕೊಟ್ಟಿದ್ದಾರೆ ಎಂದು ಭೀಮಾನಾಯ್ಕವಿರುದ್ಧ ಡ್ರೈವರ್ ರಮೇಶ್ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

ಬೆಂಗಳೂರು(ಡಿ.12): ಕಾರು ಚಾಲಕ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಭೂಸ್ವಾಧೀನ ಅಧಿಕಾರಿ ಭೀಮಾನಾಯ್ಕ್ ಅವರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಭೀಮಾ ನಾಯ್ಕ್ ವಿರುದ್ಧ ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ ನಿನ್ನೆ ಕಲಬುರಗಿಯಲ್ಲಿ ಬಂಧಿಸಲಾಗಿತ್ತು. ಆರೋಪಿಗಳಾದ ಭೀಮಾನಾಯ್ಕ್ ಹಾಗೂ ಮಹಮದ್ ಅವರನ್ನು 5 ದಿನಗಳ ಕಾಲ ಸಿಐಡಿ ವಶಕ್ಕೆ ಒಪ್ಪಿಸಲು ಮದ್ದೂರಿನ ಜೆಎಂಎಫ್​ಸಿ ನ್ಯಾಯಾಧೀಶ ಪ್ರಕಾಶ್​ ಅವರು ಆದೇಶಿಸಿದ್ದಾರೆ.

ಭ್ರಷ್ಟ ಅಧಿಕಾರಿ ಭೀಮಾನಾಯ್ಕ ರಾಜ್ಯದ ಹಲವೆಡೆ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿ ನಾಗೇಶ್ ಎಂಬುವವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಇದಲ್ಲದೇ ಬೇನಾಮಿ ಹೆಸರಿನಲ್ಲಿ ಸಾಕಷ್ಟು ಆಸ್ತಿ

ಖರೀದಿಸಿದ್ದಾರೆ. ಭೀಮಾನಾಯಕ್​ ಬ್ಲ್ಯಾಕ್​ &ವೈಟ್​ ದಂಧೆಯಲ್ಲಿ ತೊಡಗಿದ್ದಾರೆ. ರೆಡ್ಡಿ ಮಗಳ ಮದುವೆಗೂ ಕಪ್ಪು ಹಣ ಬಿಳಿಯಾಗಿಸಿಕೊಟ್ಟಿದ್ದಾರೆ ಎಂದು ಭೀಮಾನಾಯ್ಕವಿರುದ್ಧ ಡ್ರೈವರ್ ರಮೇಶ್ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಕುರಿತು ತನಿಖೆ ನಡೆಸಿ ಭೀಮಾನಾಯ್ಕ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಸಿಬಿಗೆ ನೀಡಿದ ದೂರಿನಲ್ಲಿ ನಾಗೇಶ್ ಆಗ್ರಹಿಸಿದ್ದರು.