ಜಮೀನು ಮಾಲೀಕತ್ವ ಪ್ರಕರಣ ಇತ್ಯರ್ಥಪಡಿಸುವಂತೆ ಶ್ರೀ ರಾಮುಲು ವಿರುದ್ಧ  ಬಳ್ಳಾರಿ ಕೋರ್ಟ್​ನಲ್ಲಿ ಮಾಜಿ ಸಚಿವ ಕರುಣಾಕರ ರೆಡ್ಡಿ  ದೂರು ದಾಖಲಿಸಿದ್ದಾರೆ.  ಕೆ.ತಿಮ್ಮರಾಜು, ಡಿ.ರಾಘವೇಂದ್ರ ಎಂಬುವರ ವಿರುದ್ಧವೂ ದಾವೆ ಹೂಡಿದ್ದಾರೆ.

ಬಳ್ಳಾರಿ (ಫೆ.18): ಜಮೀನು ಮಾಲೀಕತ್ವ ಪ್ರಕರಣ ಇತ್ಯರ್ಥಪಡಿಸುವಂತೆ ಶ್ರೀ ರಾಮುಲು ವಿರುದ್ಧ ಬಳ್ಳಾರಿ ಕೋರ್ಟ್​ನಲ್ಲಿ ಮಾಜಿ ಸಚಿವ ಕರುಣಾಕರ ರೆಡ್ಡಿ ದೂರು ದಾಖಲಿಸಿದ್ದಾರೆ. ಕೆ.ತಿಮ್ಮರಾಜು, ಡಿ.ರಾಘವೇಂದ್ರ ಎಂಬುವರ ವಿರುದ್ಧವೂ ದಾವೆ ಹೂಡಿದ್ದಾರೆ.

ಒಟ್ಟು 10 ಅಂಶಗಳ ವಿಚಾರವಾಗಿ ಶ್ರೀರಾಮುಲು ಸೇರಿ ಮೂವರ ವಿರುದ್ಧ ಕರುಣಾಕರ ರೆಡ್ಡಿ ದಾವೆ ಹೂಡಿದ್ದು ಬಳ್ಳಾರಿ ಸಿಜೆಎಂ ನ್ಯಾಯಾಲಯದಿಂದ ಸಮನ್ಸ್ ಜಾರಿಗೊಳಿಸಲಾಗಿದೆ.

ಬಳ್ಳಾರಿಯ ಸುಷ್ಮಾಸ್ವರಾಜ್ ಕಾಲೋನಿಯಲ್ಲಿ 1997ರಲ್ಲಿ ಶ್ರೀರಾಮುಲು, ಹಾಘೂ ರೆಡ್ಡಿ ಪ್ರತ್ಯೇಕವಾಗಿ ಜಮೀನು ಖರೀದಿಸಿದ್ದ ರು. ಬಳಿಕ ಸೈಟ್​​ ಮಾರಾಟಕ್ಕೆ ಶ್ರೀರಾಮುಲು ಮುಂದಾಗಿದ್ದರು. ಸೈಟ್ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಗೊಂದಲ ಇತ್ಯರ್ಥಪಡಿಸುವಂತೆ ಇತ್ಯರ್ಥಪಡಿಸುವಂತೆ ಪ್ರಕರಣ ದಾಖಲಿಸಲಾಗಿದೆ.