ಬೆಳಗಾವಿ: ಈ ವರ್ಷ ರಾಜ್ಯದಲ್ಲಿ ಒಳ್ಳೆಯ ಮಳೆಯಾಗುತ್ತದೆ. ನೀರು ಎಲ್ಲ ಕಡೆ ಹರಿದಾಡುತ್ತದೆ. ಗಾಳಿ ಬೀಸುತ್ತದೆ. ಶೀತಬಾಧೆಯಿಂದ ರೋಗ ಬರುವ ಅವಕಾಶ ಹೆಚ್ಚಿದೆ. 

ದೇಶದಲ್ಲಿನ ಭಯೋತ್ಪಾದನೆಗೆ ಶೀಘ್ರ ಕಡಿವಾಣ ಬೀಳಲಿದೆ ಎಂದು ಹಾರನಹಳ್ಳಿ ಕೋಡಿ ಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು. 

ಶನಿವಾರ ಬೆಳಗಾವಿ ನಗರದ ಲಕ್ಷ್ಮೆ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಸನ್ಮಾನ ಸ್ವೀಕರಿಸಿದ ಶ್ರೀಗಳು, ರಾಜ್ಯದಲ್ಲಿ ಭೀಕರ ಬರಗಾಲದಿಂದ ರೈತಾಪಿ ಜನ ತತ್ತರಿಸಿ ಹೋಗಿದ್ದಾರೆ. ಈ ವರ್ಷ ಸಾಕಷ್ಟು ಮಳೆ, ಬೆಳೆ ಆಗುತ್ತದೆ. ಜನರು ಆತಂಕ ಪಡುವ ಅಗತ್ಯವಿಲ್ಲ. ದೇಶ ಸಮೃದ್ಧಿಯಿಂದ ಇರುತ್ತದೆ ಎಂದರು.