Asianet Suvarna News Asianet Suvarna News

Live Updates - ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ

ರಾಜ್ಯದ 22 ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ.  ಮೂರೂ ಪಕ್ಷಗಳಿಗೆ ಲೋಕಲ್ ಸಂಸ್ಥೆಗಳ ಚುನಾವಣೆ ಪ್ರತಿಷ್ಠೆಯಾಗಿದ್ದು, ಮಧ್ಯಾಹ್ನದ ವೇಳೆಗೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 
 

Karnataka Urban Local Body Election Result 2018
Author
Bengaluru, First Published Sep 3, 2018, 7:50 AM IST

ಸೆಪ್ಟೆಂಬರ್ 1 ರಂದು ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗುತ್ತಿದೆ.  ರಾಜ್ಯದ 22 ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ.  ಮೂರೂ ಪಕ್ಷಗಳಿಗೆ ಲೋಕಲ್ ಸಂಸ್ಥೆಗಳ ಚುನಾವಣೆ ಪ್ರತಿಷ್ಠೆಯಾಗಿದೆ.  

ಮುಧೋಳ ನಗರಸಭೆ ವಾರ್ಡ್ ನಂ 6 ರಲ್ಲಿ 1 ಮತದ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ ಕಾಂಗ್ರೆಸ್ ಅಭ್ಯರ್ಥಿ 

ಶಿವಮೊಗ್ಗದಲ್ಲಿ ಈಶ್ವರಪ್ಪ ವಾರ್ಡ್ ನಲ್ಲೇ ಬಿಜೆಪಿ ಅಭ್ಯರ್ಥಿ ಸೋಲು 

ಖರ್ಗೆ ತವರಲ್ಲಿ ಕಾಂಗ್ರೆಸ್ ಕಮಾಲ್ 

ಮೈಸೂರು ನಗರ ಪಾಲಿಕೆಯ ಅಂತಿಮ ಫಲಿತಾಂಶ ಪ್ರಕಟ : ಬಿಜೆಪಿ 22, ಕಾಂಗ್ರೆಸ್ 19, ಜೆಡಿಎಸ್ 18, ಪಕ್ಷೇತರ 5, ಬಿಎಸ್ಪಿ 1 ಸ್ಥಾನಗಳಲ್ಲಿ ಗೆಲುವು   

ತುಮಕೂರು ಮಹಾನಗರ ಪಾಲಿಕೆ ಅತಂತ್ರ ; ಬಿಜೆಪಿ 12, ಜೆಡಿಎಸ್ 11, ಕಾಂಗ್ರೆಸ್ 9 ಹಾಗೂ ಪಕ್ಷೇತರ 3 

ದಕ್ಷಿಣ ಕನ್ನಡ ಲೋಕಲ್ ಫೈಟ್ಟ್‌ನಲ್ಲಿ ಬಿಜೆಪಿಯದ್ದೇ ಪ್ರಾಬಲ್ಯ 89 ವಾರ್ಡ್ ಗಳಲ್ಲಿ 42 ಸ್ಥಾನ ಗೆದ್ದುಕೊಂಡ ಬಿಜೆಪಿ 

ಚಿತ್ರದುರ್ಗ ನಗರ ಸಭೆಯ ವಾರ್ಡ್ ನಂ 11 ಹಾಗೂ 14 ರಲ್ಲಿ ನಿಂತಿದ್ದ ಪತಿ- ಪತ್ನಿ ಗೆಲುವು 

ಶಿರಸಿ ನಗರ ಸಭೆಯಲ್ಲಿ ಅರಳಿದ ಕಮಲ; ಕುಮಟಾ ಪುರಸಭೆಯಲ್ಲೂ ಬಿಜೆಪಿ ಗೆಲುವು 

ಮೈಸೂರಿನಲ್ಲಿ  ಹಾಲಿ ಮೇಯರ್ ಭಾಗ್ಯವತಿಗೆ ಸೋಲು  

ಚಳ್ಳಕೆರೆ ನಗರಸಭೆಯಲ್ಲಿ ಕಾಂಗ್ರೆಸ್‌ಗೆ ಗೆಲುವು ; ಶ್ರೀರಾಮುಲು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಬಿಜೆಪಿಗೆ ಮುಖಭಂಗ 

ಗೋಕಾಕ್ ಪುರಸಭೆಯ 31 ವಾರ್ಡ್‌ಗಳಲ್ಲೂ ಪಕ್ಷೇತರರದ್ದೇ ಜಯಭೇರಿ 

ಶಿವಮೊಗ್ಗ ನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ; 35 ವಾರ್ಡ್‌ಗಳಲ್ಲಿ 18 ರಲ್ಲಿ ಬಿಜೆಪಿ ಗೆಲುವು 

ಉಡುಪಿ ನಗರಸಭೆಯಲ್ಲಿ ಅರಳಿದ ಕಮಲ ; ಶಾಸಕ ರಘುಪತಿ ಭಟ್ ಸಾರಥ್ಯದಲ್ಲಿ ಅಧಿಕಾರ 

ರಾಯಚೂರಿನ ಎಲ್ಲಾ ಪುರಸಭೆಗಳಲ್ಲಿ ಕಾಂಗ್ರೆಸ್‌ನದ್ದೇ ಅಧಿಪತ್ಯ 

ಸಂಭ್ರಮಾಚರಣೆಯ ಒಂದು ದೃಶ್ಯ 

Karnataka Urban Local Body Election Result 2018

ಹೊಳೆನರಸೀಪುರ ಪುರಸಭೆಯ 23 ವಾರ್ಡ್‌ಗಳಲ್ಲಿ ಜೆಡಿಎಸ್ ಮುನ್ನಡೆ ; ಸಚಿವ ರೇವಣ್ಣಗೆ ಭಾರೀ ಜಯ 

ಚಿಕ್ಕನಾಯಕನಹಳ್ಳಿ ಪುರಸಭೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ; ಇಲ್ಲಿ ಸತತ 25 ವರ್ಷಗಳಿಂದ ಜೆಡಿಎಸ್‌ದೇ ಪಾರುಪತ್ಯ 

ಮಧುಗಿರಿ ಪುರಸಭೆ ಕಾಂಗ್ರೆಸ್ ಕೈ ವಶ 

ಪಿರಿಯಾಪಟ್ಟಣ ಪುರಸಭೆ ಜೆಡಿಎಸ್ ತೆಕ್ಕೆಗೆ ಅಧಿಕಾರ 23 ವಾರ್ಡ್ ಗಳಲ್ಲಿ ಜೆಡಿಎಸ್ 14  ವಾರ್ಡ್ ಗಳಲ್ಲಿ ಗೆಲುವು ; ಒಂದೂ ಖಾತೆ ತೆರೆಯದ ಬಿಜೆಪಿ 

ಬಂಟ್ವಾಳ ಪುರಸಭೆಯಲ್ಲಿ  SDPI ಗೆಲುವು 

ತುಮಕೂರು ಮಹಾನಗರ ಪಾಲಿಕೆಯಲ್ಲಿ ಕೈ- ತೆನೆ ಮುನ್ನಡೆ 

ಗುಬ್ಬಿ ಪಟ್ಟಣ ಪಂಚಾಯತ್ ಜೆಡಿಎಸ್ ಪಾಲು 

ಜೇವರ್ಗಿ ಪುರಸಭೆ - ವಾರ್ಡ್ ನಂ 11 ರಲ್ಲಿ ಟೈ ಫಲಿತಾಂಶ ಟಾಸ್ ಹಾಕಿ ವಿಜೇತರನ್ನು ನಿರ್ಧರಿಸಲಿರುವ ಅಧಿಕಾರಿಗಳು 

ಶಿವಮೊಗ್ಗದಲ್ಲಿ ಬಿಜೆಪಿ 10 ಕಾಂಗ್ರೆಸ್ 6 ಜೆಡಿಎಸ್ 2 ಇತರೆ 2 ಮುನ್ನಡೆ 

ಮಂಡಾಡಿಯಲ್ಲಿ ಕಾಂಗ್ರೆಸ್‌ನ ಗಂಗಾಧರ ಪೂಜಾರಿಗೆ ಗೆಲುವು 

ಅರಸೀಕೆರೆ ನಗರಸಭೆಯಲ್ಲಿ ಜೆಡಿಎಸ್ ಜಯಭೇರಿ; ಒಂದೂ ಖಾತೆ ತೆರೆಯದ ಕಾಂಗ್ರೆಸ್ -ಬಿಜೆಪಿ  

ಮೂರು ಮಹಾನಗರ ಪಾಲಿಕೆಗಳಾದ ಮೈಸೂರು, ತುಮಕೂರು ಮತ್ತು ಶಿವಮೊಗ್ಗದಲ್ಲಿಯೂ ಚುನಾವಣೆ ನಡೆದಿದ್ದು, 22 ಜಿಲ್ಲೆಗಳ 29 ನಗರಸಭೆ, 53 ಪುರಸಭೆ, 20 ಪಟ್ಟಣ ಪಂಚಾಯಿತಿಗಳಿಗೆ ಕೌಂಟಿಂಗ್ ನಡೆಯುತ್ತಿದೆ.  ಒಟ್ಟು 2634 ವಾರ್ಡ್ ಗಳಲ್ಲಿ ಅಭ್ಯರ್ಥಿಗಳು ಕಣಕ್ಕೆ, 9,121 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗುತ್ತಿದೆ. 

ದಾವಣಗೆರೆ 3 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ
ಚನ್ನಗಿರಿ ಪುರಸಭೆ 23 ವಾರ್ಡ್ ಗಳು - 2 ವಾರ್ಡ್ ಗಳಲ್ಲಿ ಅವಿರೋಧ ಆಯ್ಕೆ
23 ವಾರ್ಡ್ಗಳ ಪೈಕಿ 2 ವಾರ್ಡ್ಗಳಲ್ಲಿ ಕಾಂಗ್ರೆಸ್ನ ಇಬ್ಬರು ಅವಿರೋಧ ಆಯ್ಕೆ
ಚನ್ನಗಿರಿ ಪುರಸಭೆ 1ನೇ ವಾರ್ಡ್ - ಕಾಂಗ್ರೆಸ್ನ ಆರ್.ಲತಾ ಅವಿರೋಧ ಆಯ್ಕೆ
ಚನ್ನಗಿರಿ 13ನೇ ವಾರ್ಡ್ - ಕಾಂಗ್ರೆಸ್ನ ರೋಹಿನ್ ತಾಜ್ ಅವಿರೋಧ ಆಯ್ಕೆ

ಕೊಟ್ಟೂರು ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಗೆಲುವು

ಯಾದಗಿರಿಯಲ್ಲಿ 2 ವಾರ್ಡ್ ಗಳಲ್ಲಿ ಬಿಜೆಪಿ ಒಂದು, ಕಾಂಗ್ರೆಸ್ ಒಂದರಲ್ಲಿ ಗೆಲುವು

ಕುಡಿತಿನಿಯಲ್ಲಿ ಬಿಜೆಪಿಗೆ ವಿಜಯ

ಮದ್ದೂರಿನಲ್ಲಿ ಜೆಡಿಎಸ್ ಗೆಲುವು

ಪಿರಿಯಾ ಪಟ್ಟಣ ಪುರಸಭೆ ಮೂರು ಸ್ಥಾನಗಳಲ್ಲಿ ಜೆಡಿಎಸ್ ಗೆಲುವು

ದೇವಗುರ್ಗ ಪುರಸಭೆಯಲ್ಲಿ ಕಾಂಗ್ರೆಸ್ 1, ಬಿಜೆಪಿ 1, ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವು

ಮಾನ್ವಿ ಪುರಸಭೆಯಲ್ಲಿ 5 ಸ್ಥಾನಗಳಲ್ಲಿ ಬಿಜೆಪಿ ಗೆಲುವು

ಮಧುಗಿರಿ ಪುರಸಭೆಯಲ್ಲಿ 2 ಸ್ಥಾನಗಳಲ್ಲಿ ಜೆಡಿಎಸ್ ಗೆಲುವು

ಉಳ್ಳಾಲ ನಗರಸಭೆಯಲ್ಲಿ 3 ಕಾಂಗ್ರೆಸ್, 3 ಜೆಡಿಎಸ್, 2 ಕಡೆ ಎಸ್ ಡಿ ಪಿ ಐ ಗೆಲುವು

ಚೆನ್ನಗಿರಿ ಪುರಸಭೆಯಲ್ಲಿ ಕಾಂಗ್ರೆಸ್ 1, ಜೆಡಿಎಸ್ 3 ಬಿಜೆಪಿ 9 ರಲ್ಲಿ ಗೆಲುವು

ಚಿತ್ರದುರ್ಗ ನಗರಸಭೆಯಲ್ಲಿ 1 ಸ್ಥಾನದಲ್ಲಿ ಕಾಂಗ್ರೆಸ್ ಗೆಲುವು

ಬಾಗಲಕೋಟೆಯಲ್ಲಿ 1 ಸ್ಥಾನದಲ್ಲಿ ಬಿಜೆಪಿ ಗೆಲುವು

ಮುದ್ದೆ ಬಿಹಾಳದಲ್ಲಿ ಕಾಂಗ್ರೆಸ್ 8. ಬಿಜೆಪಿ 8 ಇತರೆ 2 ಸ್ಥಾನಗಳಲ್ಲಿ ಗೆಲುವು

Follow Us:
Download App:
  • android
  • ios