ಉಗ್ರಪ್ಪ ಅವರು ಸಹ ಮಂತ್ರಿ ಆಗಬಹುದಿತ್ತು. ಆದರೆ ಇತ್ತೀಚೆಗೆ ನಡೆದ ಬೆಳವಣಿಗೆ ಅವರನ್ನು ಮಂತ್ರಿ ಆಗದಂತೆ ಕಟ್ಟಿಹಾಕಿವೆ

ಬೆಂಗಳೂರು(ವಿಧಾನಪರಿಷತ್‌): ವಿ.ಎಸ್‌. ಉಗ್ರಪ್ಪ ಮಂತ್ರಿ ಆಗಬಹುದಿತ್ತು, ಆದರೆ ಇತ್ತೀಚಿನ ಬೆಳವಣಿಗೆಗಳು ಈ ಅವಕಾಶವನ್ನು ತಪ್ಪಿಸಿವೆ ಎಂಬ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳುವ ಮೂಲಕ ಸ್ವಾರಸ್ಯಕರ ಚರ್ಚೆಯೊಂದಕ್ಕೆ ನಾಂದಿ ಹಾಡಿದರು.

ಬರದ ಮೇಲೆ ಈಶ್ವರಪ್ಪ ಚರ್ಚಿಸುವ ವೇಳೆ ಪ್ರಾಸಂಗಿಕವಾಗಿ ಅಧಿವೇಶನ ನಂತರ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿರುವುದರಿಂದ ಅನೇಕ ಸದಸ್ಯರು ಯಾವಾಗ ಅಧಿವೇಶನ ಮುಗಿಯುತ್ತದೆ ಎಂದು ಕಾಯುವಂತಾಗಿದೆ. ಉಗ್ರಪ್ಪ ಅವರು ಸಹ ಮಂತ್ರಿ ಆಗಬಹುದಿತ್ತು. ಆದರೆ ಇತ್ತೀಚೆಗೆ ನಡೆದ ಬೆಳವಣಿಗೆ ಅವರನ್ನು ಮಂತ್ರಿ ಆಗದಂತೆ ಕಟ್ಟಿಹಾಕಿವೆ ಎಂದು ಮಾತಿನಿಂದ ಚಿವುಟಿದರು.