ವಿಧಾನಸಭೆಯಿಂದ ವಿಧಾನಪರಿಷತ್ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರದಿಂದ ಸಂಖ್ಯಾಬಲದಿಂದ ಮೂವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇನ್ನು ಇವರು ನಾಮಪತ್ರದಲ್ಲಿ ಘೋಷಿಸಿಕೊಂಡಿರುವ ಆಸ್ತಿ ಮೌಲ್ಯ ಎಷ್ಟಿದೆ ಎನ್ನುವುದನ್ನು ಮುಂದೆ ಓದಿ.
ಬೆಂಗಳೂರು, [ಸೆ.25]: ವಿಧಾನಸಭೆಯಿಂದ ವಿಧಾನಪರಿಷತ್ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ಅಕ್ಟೋಬರ್ 3ರಂದು ಚುನಾವಣೆ ನಡೆಯಲಿದೆ.
ಒಟ್ಟು ಮೂರು ಸ್ಥಾನಗಳ ಪೈಕಿ ಕಾಂಗ್ರೆಸ್ 2 ಹಾಗೂ ಜೆಡಿಎಸ್ 1 ಸ್ಥಾನವನ್ನು ಹಂಚಿಕೊಂಡಿದೆ. ಕಾಂಗ್ರೆಸ್ ನಿಂದ ವೇಣುಗೋಪಾಲ್ ಮತ್ತು ನಜೀರ್ ಅಹ್ಮದ್ ನಾಮಪತ್ರ ಸಲ್ಲಿಸಿದ್ದರೆ, ಜೆಡಿಎಸ್ ನಿಂದ ರಮೇಶ್ ಗೌಡ ನಾಮಪತ್ರ ಸಲ್ಲಿಸಿದ್ದಾರೆ.
ಆಪರೇಷನ್ ಫೇಲ್: ಪರಿಷತ್ ಚುನಾವಣಾ ಕಣದಿಂದ ಹಿಂದೆ ಸರಿದ ಬಿಜೆಪಿ
ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರದಿಂದ ಸಂಖ್ಯಾಬಲದಿಂದ ಈ ಮೂವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇನ್ನು ಇವರು ನಾಮಪತ್ರದಲ್ಲಿ ಘೋಷಿಸಿಕೊಂಡಿರುವ ಆಸ್ತಿ ಮೌಲ್ಯ ಎಷ್ಟಿದೆ ಎನ್ನುವುದನ್ನು ಮುಂದೆ ಓದಿ.
1) ಕೈ ಅಭ್ಯರ್ಥಿ ವೇಣುಗೋಪಾಲ್
* 1.27 ಕೋಟಿ ಚರಾಸ್ತಿ, 8.17 ಕೋಟಿ ರೂ ಮೊತ್ತದ ಸ್ಥಿರಾಸ್ತಿ
* 4.9 ಕೋಟಿ ರೂಪಾಯಿ ಸಾಲ, ಪತ್ನಿ ಹೆಸರಿನಲ್ಲಿ 54.8 ಲಕ್ಷ ಚರಾಸ್ತಿ
* ಮಕ್ಕಳ ಹೆಸರಲ್ಲಿ 42 ಲಕ್ಷ ರೂ ಮೊತ್ತದ ಚರಾಸ್ತಿ ಹಾಗೂ 30 ಲಕ್ಷ ರೂ ಸ್ಥಿರಾಸ್ತಿ
2) ಜೆಡಿಎಸ್ ಅಭ್ಯರ್ಥಿ ರಮೇಶ್ ಗೌಡ ಆಸ್ತಿ
* ಜೆಡಿಎಸ್ ಅಭ್ಯರ್ಥಿ ರಮೇಶ್ ಗೌಡ ಆಸ್ತಿ ಬಳಿ 5 ಲಕ್ಷ ರೂಪಾಯಿ ನಗದು
* 45 ಲಕ್ಷ ರೂ ಚರಾಸ್ತಿ, 11.5 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಇದೆ
* 2.1 ಕೋಟಿ ರೂ ಸಾಲ, ಪತ್ನಿ ಹೆಸರಲ್ಲಿ 12 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ
* 1.9 ಕೋಟಿ ರೂ ಮೌಲ್ಯದ ಚರಾಸ್ತಿ, 7.1 ಕೋಟಿ ರೂ ಸಾಲ ಇದೆ
3) ಕೈ ಅಭ್ಯರ್ಥಿ ನಜೀರ್ ಅಹ್ಮದ್ ಆಸ್ತಿ
* ಕಾಂಗ್ರೆಸ್ ಅಭ್ಯರ್ಥಿ ನಜೀರ್ ಅಹ್ಮದ್ ಬಳಿ 15 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ
*10.17 ಕೋಟಿ ರೂ ಮೌಲ್ಯದ ಚರಾಸ್ತಿ, 4.51 ಲಕ್ಷ ರೂ ಮೊತ್ತದ ಚಿನ್ನಾಭರಣ
* 18.73 ಕೋಟಿ ರೂ ಸಾಲ, ಪತ್ನಿ ಹೆಸರಲ್ಲಿ 2.75 ಕೋಟಿ ರೂ ಮೊತ್ತದ ಸ್ಥಿರಾಸ್ತಿ
* 43 ಲಕ್ಷ ರೂ ಸಾಲ ಇದೆ ತೋರಿಸಿರುವ ಕೈ ಅಭ್ಯರ್ಥಿ ನಜೀರ್ ಅಹ್ಮದ್
