ಬೆಂಗಳೂರು[ಜು.20]: ಶುಕ್ರವಾರ ಮಧ್ಯಾಹ್ನ ವಿಧಾನಸಭೆಯ ಮೊಗಸಾಲೆಯಲ್ಲಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ತಮ್ಮ ಪಕ್ಷದ ಶಾಸಕರಿಗೆ ಚಾಮುಂಡೇಶ್ವರಿ ದೇವಿಯ ಭಸ್ಮ ನೀಡುವ ಮೂಲಕ ಶುಭ ಹಾರೈಸಿದರು.

ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಬೆಳಗ್ಗೆ ಮೈಸೂರಿನ ಚಾಮುಂಡೇಶ್ವರಿ ಬೆಟ್ಟವನ್ನು ಬರಿಗಾಲಲ್ಲೇ ಮೆಟ್ಟಿಲುಗಳ ಮೂಲಕ ಏರಿ ದೇವಿಯ ದರ್ಶನ ಪಡೆದಿದ್ದ ಶೋಭಾ ಅವರು ಅಲ್ಲಿಂದ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿ ದರು. ವಿಧಾನಸಭೆಯ ಮೊಗಸಾಲೆಯಲ್ಲಿ ತಮ್ಮ ಶಾಸಕರನ್ನು ಕಂಡು ಚೀಟಿಯೊಂದರಲ್ಲಿ ತಂದಿದ್ದ ಭಸ್ಮವನ್ನು ನೀಡುತ್ತಿದ್ದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಾಸಕರು ತಾವು ಧರಿಸಿದ್ದ ಚಪ್ಪಲಿ ಬಿಟ್ಟು ಭಸ್ಮವನ್ನು ಬೆರಳಿನಿಂದ ತೆಗೆದುಕೊಂಡು ಹಣೆಗೆ ಹಚ್ಚಿಕೊಳ್ಳುತ್ತಿದ್ದುದು ಕಂಡು ಬಂತು.