ಬೆಂಗಳೂರು[ಜು.11]: ಕಳೆದೊಂದು ವಾರದಿಂದ ನಡೆಯುತ್ತಿರುವ ರಾಜ್ಯ ರಾಜಕೀಯದ ಹೈಡ್ರಾಮಾಗೆ ಇಂದು ತಾರ್ಕಿಕ ಅಂತ್ಯ ಸಿಗುವ ನಿರೀಕ್ಷೆಗಳಿವೆ. ಶಾಸಕರ ಸರಣಿ ರಾಜೀನಾಮೆಯಿಂದ ಕಂಗೆಟ್ಟ ದೋಸ್ತಿ ಸರ್ಕಾರ ಪತನದಂಚಿಗೆ ತಲುಪಿದೆ. ಮೈತ್ರಿ ನಾಯಕರು ಅತೃಪ್ತರ ಮನವೊಲಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಡುವೆ ಇಂದು ಸಂಪುಟ ಸಭೆ ನಡೆಯಲಿದ್ದು, ಕೊನೆಯ ಪ್ರಯತ್ನವೆಂಬಂತೆ ದೋಸ್ತಿ ನಾಯಕರು ಸರ್ಕಾರ ಉಳಿಸಿಕೊಳ್ಳಲು ಪಂಚಸೂತ್ರ ಳವಡಿಸಿಕೊಳ್ಳುವ ಸಾಧ್ಯತೆಗಳಿವೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೌದು ಕಾಂಗ್ರೆಸ್ ಜೆಡಿಎಸ್ ನಾಯಕರು ಕೊನೆ ಕ್ಷಣದಲ್ಲೂ ಸರ್ಕಾರ ಉಳಿಸಿಕೊಳ್ಳುವ ಕಸರತ್ತು ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಮೈತ್ರಿಗೆ ಮರು ಜೀವ ನೀಡಲು ದೋಸ್ತಿ ನಾಯಕರ ಮೆಗಾಪ್ಲ್ಯಾನ್ ರಚಿಸಿದ್ದಾರೆ. ಕೆಕೆ ಗೆಸ್ಟ್ ಗೌಸ್ನಲ್ಲಿ ಕಾಂಗ್ರೆಸ್- ಜೆಡಿಎಸ್ ನಾಯಕರ ಅಂತಿಮ ಸಭೆಯಲ್ಲಿ ಪಂಚತಂತ್ರ ಹೆಣೆಯಲಾಗಿದೆ. ಸ್ಪೀಕರ್ ಕುರಿತಾಗಿ ಸುಪ್ರೀಂಕೋರ್ಟ್ ತೀರ್ಪಿಗೂ ಮುನ್ನ ದೋಸ್ತಿ ವಾರ್ ರೂಂನಲ್ಲಿ ರೂಪಿಸಿರುವ ಈ ರಣತಂತ್ರ ಅನುಸರಿಸುವ ಎಲ್ಲಾ ಸಾಧ್ಯತೆಗಳು ಕಂಡು ಬಂದಿವೆ.

ದೋಸ್ತಿ ಪಂಚತಂತ್ರ 

ಸೂತ್ರ : 1 ಕಾಂಗ್ರೆಸ್ ಗೆ ಅಧಿಕಾರ ಬಿಟ್ಟುಕೊಡುವುದು

ಸೂತ್ರ: 2 ಸಿದ್ದರಾಮಯ್ಯ ಮುಖ್ಯಂಂತ್ರಿ , ಎಚ್.ಡಿ. ರೇವಣ್ಣ ಡಿಸಿಎಂ

ಸೂತ್ರ : 3 ಮೈತ್ರಿ ಸರ್ಕಾರವನ್ನೇ ವಿಸರ್ಜನೆ ಮಾಡುವುದು

ಸೂತ್ರ :4 ಎಲ್ಲ ಬಂಡಾಯ ಶಾಸಕರನ್ನು ಅನರ್ಹಗೊಳಿಸುವುದು 

ಸೂತ್ರ : 5 ಜೆಡಿಎಸ್-ಕಾಂಗ್ರೆಸ್ ಎಲ್ಲ  ಶಾಸಕರು ರಾಜೀನಾಮೆ ಕೊಟ್ಟು ಮಧ್ಯಂತರ ಚುನಾವಣೆ