Asianet Suvarna News Asianet Suvarna News

ಕಾಂಗ್ರೆಸ್ 22, ಜೆಡಿಎಸ್‌ 9: ದೋಸ್ತಿ ಸರ್ಕಾರದ ಎಲ್ಲಾ ಸಚಿವರ ರಾಜೀನಾಮೆ!

ಕಾಂಗ್ರೆಸ್ನ ಎಲ್ಲಾ ಸಚಿವರ ರಾಜೀನಾಮೆ| ಎಲ್ಲಾ 22 ಸಚಿವರಿಂದ ರಾಜೀನಾಮೆ| ಸರ್ಕಾರ ಉಳಿಸಿಕೊಳ್ಳಲು ರಾಜೀನಾಮೆಗೆ ಮೊರೆ| ಬ್ರೇಕ್ಫಾಸ್ಟ್ ಮೀಟಿಂಗ್ನಲ್ಲಿ ತೀರ್ಮಾನ| ಸಿಎಂ ಕೈಗೆ ರಾಜೀನಾಮೆ ನೀಡಲಿರುವ ಸಚಿವರು

Karnataka Politics All Congress and JDS ministers to put their papers to down
Author
Bangalore, First Published Jul 8, 2019, 10:56 AM IST

ಬೆಂಗಳೂರು[ಜು.08]: ರಾಜ್ಯ ರಾಜ್ಯಕಾರಣದಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿದ್ದು, ಇದೀಗ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಎಲ್ಲಾ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್, ದಿನೇಶ್ ಗುಂಡೂರಾವ್, ಡಿಕೆಶಿ ಮೊದಲಾದ ಪ್ರಮುಖ ನಾಯಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಹೌದು ಮೈತ್ರಿ ಸರ್ಕಾರ ಕಾಮರಾಜ ಸೂತ್ರದ ಮೊರೆ ಹೋಗಿದ್ದು, ಕಾಂಗ್ರೆಸ್ ಪಕ್ಷದ 22 ಸಚಿವರು ಹಾಗೂ ಜೆಡಿಎಸ್ ಪಕ್ಷದ 9 ಸಚಿವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈ ಮೂಲಕ ದೋಸ್ತಿಗಳು ಸರ್ಕಾರ ಉಳಿಸಿಕೊಳ್ಳಲು ಕೊನೆಯ ಅಸ್ತ್ರ ಪ್ರಯೋಗಿಸಿದ್ದಾರೆ. ಸಿಎಂ ಕುಮಾರಸ್ವಾಮಿ ಕೈಗೆ ಸಚಿವರು ರಾಜೀನಾಮೆ ಪತ್ರ ನೀಡಲಿದ್ದು, ಸಂಜೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ ಕೆಲ ಸಚಿವರು ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದಾರೆನ್ನಲಾಗಿದೆ. 'ನಾವು ಇತ್ತೀಚೆಗಷ್ಟೇ ಮಂತ್ರಿಯಾದವರು, ನಾವ್ಯಾಕೆ ರಾಜೀನಾಮೆ ನೀಡಬೇಕು' ಎಂದು ಪ್ರಶ್ನಿಸಿದ್ದಾರೆ. ಆದರೆ ಹಿರಿಯ ನಾಯಕರು ಸಚಿವರ ಮನವೊಲಿಸುವ ಯತ್ನ ಮುಂದುವರೆಸಿದ್ದಾರೆ.

Follow Us:
Download App:
  • android
  • ios