ಬೆಂಗಳೂರು[ಜು.11]: ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕ ಎಸ್ ಟಿ ಸೋಮಶೇಖರ್ ಸದ್ಯ ತನ್ನ ನಾಯಕನ ಕೈಗೆ ಸಿಗದಂತೆ ತಪ್ಪಿಸಿಕೊಳ್ಳಲಾರಂಭಿಸಿದ್ದಾರೆ. ಮುಂಬೈನಲ್ಲಿದ್ದ ಸೋಮಶೇಖರ್ ಕೆಲಸದ ನಿಮಿ೯ತ್ತ ಬೆಂಗಳೂರಿಗೆ ಆಗಮಿಸಿದ್ದರಾದರೂ ಸಿದ್ದರಾಮಯ್ಯಗೆ ಸಿಗದೇ ಮತ್ತೆ ಮುಂಬೈ ಸೇರಿದ್ದಾರೆ.

ಹೌದು ರಾಜೀನಾಮೆ ಸಲ್ಲಿಸಿ ಮುಂಬೈ ಹೋಟೆಲ್ ಸೇರಿದ್ದ ಶಾಸಕ ಎಸ್ ಟಿ ಸೋಮಶೇಖರ್, ಕರ್ನಾಟಕ ಹೌಸಿಂಗ್ ಬೋರ್ಡ್ ಚುನಾವಣೆಗಾಗಿ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಸಿದ್ದರಾಮಯ್ಯ ಸೋಮಶೇಖರ್ ರನ್ನು ಭೇಟಿಯಾಗಲು ಯತ್ನಿಸಿದ್ದಾರೆ. ಆದರೆ ಈ ಯತ್ನ ಸಂಪೂರ್ಣ ವಿಫಲವಾಗಿದ್ದು, ಶಾಸಕ ಚುನಾವಣಾ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಯಾರಿಗೂ ಸುಳಿವು ಸಿಗದಂತೆ ಮತ್ತೆ ಮುಂಬೈಗೆ ಹಾರಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಿನ್ನೆ ಬುಧವಾರ ವಿಧಾನಸೌಧದಲ್ಲಿ ಎಂ ಟಿ ಬಿ ನಾಗರಾಜ್ ಹಾಗೂ ಸುಧಾಕರ್ ರಾಜೀನಾಮೆ ವೇಳೆ ಹೈಡ್ರಾಮ ನಡೆದಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಸೋಮಶೇಖರ್ ಜತೆ ಈ ಬೆಳವಣಿಗೆಯಾಗಬಾರದೆಂದು ಬಿಜೆಪಿ ಪ್ಲಾನ್ ರೆಡಿ ಮಾಡಿದೆ. ಇದರಂತೆ ಸೋಮಶೇಖರ್ ರನ್ನು ಬಿಜೆಪಿ ಕಾರ್ಯಕರ್ತರು ಸುತ್ತುವರೆದಿದ್ದರು. ಇತ್ತ ಸಿದ್ದರಾಮಯ್ಯ ಬಣ ಸೋಮಶೇಖರ್ ಭೇಟಿಗೆ ಯತ್ನಿಸಿದ್ದರಾದರೂ ಯವುದೇ ಫಲ ನೀಡಿಲ್ಲ.