ಸಾವಯವ ಹಾಗೂ ಸಿರಿ ಧಾನ್ಯಗಳ ಉತ್ಪಾದನೆ, ಮಾರುಕಟ್ಟೆಹಾಗೂ ರಫ್ತು ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾ ರದ ಸಾವಯವ ನೀತಿ ಈಗಾಗಲೇ ಯಶಸ್ಸಿನ ಹಾದಿಯಲ್ಲಿದೆ. ಇದೇ ಮಾದರಿಯನ್ನು ದೇಶಾದ್ಯಂತ ಜಾರಿಗೊಳಿಸಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ.

ಬೆಂಗಳೂರು (ಏ.29): ರಾಜ್ಯದಲ್ಲಿ ಜಾರಿಗೊಳಿಸಲಾಗಿರುವ ಸಾವ ಯವ ಕೃಷಿ ನೀತಿಯನ್ನು ದೇಶಾದ್ಯಂತ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸಾವಯವ ಕೃಷಿ ನೀತಿಯನ್ನು ರೂಪಿಸಲು ಶೀಘ್ರವೇ ದುಂಡು ಮೇಜಿನ ಸಭೆ ನಡೆಸಲಾ ಗುವುದು. ದೇಶದಲ್ಲಿ ಖಾದಿ ಚಳವಳಿ ಮಾದ ರಿಯಲ್ಲಿ ಸಾವಯವ ಮತ್ತು ಸಿರಿಧಾನ್ಯ ಕೃಷಿಯ ಚಳವಳಿಗೆ ನಾಂದಿ ಹಾಡಲಾಗುವುದು ಎಂದು ಕೇಂದ್ರ ಸಚಿವ ಅನಂತ್‌ಕುಮಾರ್‌ ಪ್ರಕಟಿಸಿದರು.

ಅರಮನೆ ಮೈದಾನದಲ್ಲಿ ಶುಕ್ರವಾರ ದಿಂದ ಆರಂಭಗೊಂಡ ಸಾವಯವ ಹಾಗೂ ಸಿರಿಧಾನ್ಯಗಳ ರಾಷ್ಟ್ರೀಯ ವಾಣಿಜ್ಯ ಮೇಳ ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾವಯವ ಹಾಗೂ ಸಿರಿ ಧಾನ್ಯಗಳ ಉತ್ಪಾದನೆ, ಮಾರುಕಟ್ಟೆಹಾಗೂ ರಫ್ತು ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾ ರದ ಸಾವಯವ ನೀತಿ ಈಗಾಗಲೇ ಯಶಸ್ಸಿನ ಹಾದಿಯಲ್ಲಿದೆ. ಇದೇ ಮಾದರಿಯನ್ನು ದೇಶಾದ್ಯಂತ ಜಾರಿಗೊಳಿಸಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ. ಈ ಕುರಿತು ಕೇಂದ್ರ ಸರ್ಕಾರದ ಸಂಬಂಧಪಟ್ಟಇಲಾಖೆ ಗಳ ಸಚಿವರೊಂದಿಗೆ ರಾಜ್ಯದ ತಂಡ, ತಜ್ಞರು, ಮಾರುಕಟ್ಟೆ ಪರಿಣಿತರು ಮತ್ತು ಉತ್ಪಾದಕರ ದುಂಡು ಮೇಜಿನ ಸಭೆ ಏರ್ಪಡಿಸಿ, ಸಮಗ್ರ ನೀತಿ ರೂಪಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಈಗಾಗಲೇ ಪಡಿತರ ವ್ಯವಸ್ಥೆ ಮೂಲಕ ಸಿರಿಧಾನ್ಯಗಳ ವಿತರಣೆಗೆ ಮುಂದಾಗಿರುವ ಮಾದರಿಯಲ್ಲೇ ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಸಿರಿಧಾನ್ಯಗಳನ್ನು ವಿತರಿಸಿ ದಲ್ಲಿ ಬಹುದೊಡ್ಡ ಮಾರುಕಟ್ಟೆ ನಿರ್ಮಾಣವಾಗಲಿದೆ. ಅದರಿಂದ ಸಿರಿಧಾನ್ಯಗಳನ್ನು ಬೆಳೆಯುವ ರೈತರಿಗೆ ಉತ್ತೇಜನ ಸಿಗಲಿದೆ. ಈ ಕುರಿತು ಕೇಂದ್ರ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಅವರೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಗೊಬ್ಬರ ಬಳಕೆಯನ್ನು ಕ್ರಮೇಣ ಶೂನ್ಯದತ್ತ ಕೊಂಡೊಯ್ಯಲು ಸಾವಯವ ಮತ್ತು ಜೈವಿಕ ಗೊಬ್ಬರ ಬಳಕೆಗೆ ಸಬ್ಸಿಡಿ ನೀಡುವುದು ಎಂದು ಹೇಳಿದರು.

ಸಾವಯವ ಹಾಗೂ ಸಿರಿಧಾನ್ಯಗಳ ವಾಣಿಜ್ಯ ಮೇಳಕ್ಕೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಚಾಲನೆ ನೀಡಿದರು.ರಾಜ್ಯದ ಕೃಷಿ ಸಚಿವ ಕೃಷ್ಣ ಬೈರೇಗೌಡ, ಸಚಿವರಾದ ಎಚ್‌.ಕೆ.ಪಾಟೀಲ್‌, ಎಸ್‌.ಎಸ್‌.ಮಲ್ಲಿಕಾರ್ಜುನ, ಎಂ.ಆರ್‌.ಸೀತಾ ರಾಂ, ಕೇಂದ್ರದ ಮಾಜಿ ಸಚಿವ ಸೋಮ ಪಾಲ್‌ ಶಾಸ್ತ್ರಿ, ಕೇಂದ್ರ ಕೃಷಿ ಇಲಾಖೆಯ ಕಾರ್ಯದರ್ಶಿ ಎಂ.ಮಹೇಶ್ವರ್‌ರಾವ್‌, ವಿಧಾನ ಪರಿಷತ್‌ ಸದಸ್ಯರಾದ ರಾಮಚಂ ದ್ರಗೌಡ, ರಿಜ್ವಾನ್‌ ಅರ್ಷದ್‌ ಇದ್ದರು.