ಬೆಳಗಾವಿ :  ಬೆಳಗಾವಿ ರಾಜಕಾರಣದಲ್ಲಿ ಜಾರಕಿಹೊಳಿ ಸಹೋದರರ ನಡುವಿನ ವಾಕ್ಸಮರ ದಿನೇ ದಿನೇ ಮಿತಿ ಮೀರುತ್ತಿದೆ. ಮೊನ್ನೆಯಷ್ಟೇ ಅಣ್ಣಾ ರಮೇಶ್ ಜಾರಕಿಹೊಳಿ ವಿರುದ್ಧ ತಮ್ಮ ಸತೀಶ್ ಜಾರಕಿಹೊಳಿ ಗುಡುಗಿದ್ದರು. ಇದೀಗ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. 

"

ನಾನು ಸದ್ಯ ಕಾಂಗ್ರೆಸ್ ಬಿಟ್ಟಿಲ್ಲ, ತಾಂತ್ರಿಕವಾಗಿ ಪಕ್ಷದಲ್ಲಿ ಇದ್ದೇನೆ. ಕತ್ತಲಲ್ಲಿ ಕುಳಿತು ಕಲ್ಲು ಎಸೆಯುವ ವ್ಯಕ್ತಿ ನಾನಲ್ಲ. ಭಿನ್ನಮತ ಆರಂಭಕ್ಕೆ ಸಚಿವ ಸತೀಶ ಜಾರಕಿಹೊಳಿಯೇ ಕಾರಣ. ಅವರು ಗೋಮುಖ ವ್ಯಾಘ್ರ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. 

ನಾನು ಸಚಿವನಾಗಿ ಅರಾಮ್ ಆಗಿ ಇದ್ದೆ. ರಾಜಕೀಯ ಭವಿಷ್ಯದ ದೃಷ್ಟಿಯಿಂದ ಪ್ರಚೋದನೆ ಕೊಟ್ಟರು. ಬಂಡಾಯಕ್ಕೆ ಪ್ರಚೋದನೆ ನೀಡಿದ್ದೇ ಸತೀಶ್ ಜಾರಕಿಹೊಳಿ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. 

ಇನ್ನು ರಾಜೀನಾಮೆ ಬಗ್ಗೆಯೂ ಮಾತನಾಡಿದ ಅವರು ಬೆಂಬಲಿಗ ಶಾಸಕರ ಜೊತೆಗೆ ಚರ್ಚಿಸಿ ನಂತರ ಈ ಬಗ್ಗೆ ಹೇಳುತ್ತೇನೆ ಎಂದರು.