ಬೆಂಗಳೂರು(ಜ.01) ಸಚಿವ ಡಿಕೆ ಶಿವಕುಮಾರ್ ತಮ್ಮ ಒಂದು ಕಾಲದ ರಾಜಕೀಯ ಗುರುಗಳಾದ ಎಸ್‌ ಎಂ ಕೃಷ್ಣ ಅವರನ್ನು ಭೇಟಿ ,ಮಾಡಿ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. 

ಎಸ್ ಎಂ ಕೃಷ್ಣ ಜೊತೆ ನನ್ನ ಸಂಬಂಧ ಬಗ್ಗೆ ಯಾರೂ ಪ್ರಶ್ನೆ ಮಾಡಕ್ಕಾಗಲ್ಲ. ನನಗೆ ಅವರು ತಂದೆ ಸಮಾನ. ರಾಜಕೀಯವಾಗಿ ಮಾರ್ಗದರ್ಶನ ತೋರಿದವರು. ಪ್ರತೀ ವರ್ಷ ನಾನು ಅವರ ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ಕೃಷ್ಣ ಬಿಜೆಪಿ ಸೇರಿದ್ದರು. ಸಹಜವಾಗಿಯೇ ಡಿಕೆಶಿ ಭೇಟಿ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ.

ಸ್ಟೀಲ್ ಬ್ರಿಡ್ಜ್‌ ಅಂತಷ್ಟೇ ಅಲ್ಲ ಅದು ಏರ್ ಪೋರ್ಟ್ ಗೆ ಸಂಪರ್ಕ ಜನರಿಗೆ ಅನುಕೂಲವಾಗುವ ಯೋಜನೆ.  ಜನರಿಗೆ ಸಮಯ ಮುಖ್ಯ ಸಂಚಾರ ಸುಲಭ ಮಾಡುವುದು ನಮ್ಮ ಉದ್ದೇಶ. ವಿರೋಧ ಪಕ್ಷದವರ ವಿರೋಧ ನೋಡಿ ಕೆಲಸ ಮಾಡಕ್ಕಾಗುತ್ತಾ? ಮೊಸರಲ್ಲಿ ಕಲ್ಲು ಹುಡುಕೋರ ಮಾತನ್ನ ಗಂಭೀರ ವಾಗಿ ತಗೊಳ್ಳೊಕ್ಕಾಗುತ್ತಾ? ಸುಳ್ಳು ಆರೋಪ ಮಾಡಲಾಗಿತ್ತು ಸರ್ಕಾರಕ್ಕೆ ಬ್ಲಾಕ್ ಮೇಲ್ ಮಾಡಿ, ಹೆದರಿಸಿದರೆ ಆಗುತ್ತಾ? ತಪ್ಪಿದ್ರೆ ಹೇಳಲಿ ಸಲಹೆ ಕೊಡಲಿ.. ಯಾರು ಹರಿಶ್ಚಂದ್ರರಲ್ಲ ಎಂದು ಮತ್ತೆ ಚರ್ಚೆಗೆ ಬಂದಿರುವ ಸ್ಟೀಲ್ ಬ್ರಿಡ್ಜ್‌ ಪರ ಬ್ಯಾಟ್ ಬೀಸಿದರು.