Asianet Suvarna News Asianet Suvarna News

ಅಮೆರಿಕದ ದೇವಿ ಮಂದಿರಕ್ಕೆ ಕನ್ನಡತಿಗೆ ಪ್ರವೇಶ ನಕಾರ

ಗುಜರಾತಿಗಳು ಏರ್ಪಡಿ ಸುವ ಗರ್ಬಾ ನೃತ್ಯ ನಡೆಯುತ್ತಿದ್ದ ಹಿಂದೂ ದೇವಾಲಯವೊಂದರಲ್ಲಿ ಹಿಂದೂ ಜೋಡಿಗೇ ಪ್ರವೇಶ ನಿರಾಕರಿಸಿದ ಘಟನೆ ಅಮೆರಿಕದ ಅಟ್ಲಾಂಟಾದಲ್ಲಿ ನಡೆದಿದೆ. 

Karnataka Lady Denied Entry To Garba Venue In USA
Author
Bengaluru, First Published Oct 16, 2018, 12:37 PM IST

ಅಟ್ಲಾಂಟಾ: ನವರಾತ್ರಿ ನಿಮಿತ್ತ ಗುಜರಾತಿಗಳು ಏರ್ಪಡಿ ಸುವ ಗರ್ಬಾ ನೃತ್ಯ ನಡೆಯುತ್ತಿದ್ದ ಹಿಂದೂ ದೇವಾಲಯವೊಂದರಲ್ಲಿ ಹಿಂದೂ ಜೋಡಿಗೇ ಪ್ರವೇಶ ನಿರಾಕರಿಸಿದ ಘಟನೆ ಅಮೆರಿಕದ ಅಟ್ಲಾಂಟಾದಲ್ಲಿ ನಡೆದಿದೆ. ಗುಜರಾತ್ ಮೂಲದ ವೈದ್ಯ ಡಾ| ಕರಣ್ ಜಾನಿ ಹಾಗೂ ಅವರ  ಸ್ನೇಹಿತೆ, ಕರ್ನಾಟಕ ಮೂಲದ ಮುರ್ಡೇಶ್ವರ (ಈಕೆಯ ಪೂರ್ಣ ಹೆಸರು ಗೊತ್ತಾಗಿಲ್ಲ) ಎಂಬುವರಿಗೆ ದೇಗುಲ ಪ್ರವೇಶ ನಿರಾಕರಿಸಲಾಗಿದ್ದು, ‘ನೀವು ‘ಮುಸ್ಲಿಮರಿದ್ದಂತೆ’ ಕಾಣುತ್ತದೆ’ ಎಂದು ಹೇಳಿ ಧರ್ಮ ನಿಂದನೆ ಮಾಡಲಾಗಿದೆ. ಡಾ| ಕರಣ್ ಜಾನಿ  ಅವರು ತಮಗೆ ಹಾಗೂ ತಮ್ಮ ಕನ್ನಡತಿ ಸ್ನೇಹಿತೆಗೆ ಆದ ಅವಮಾನ ವನ್ನು ಟ್ವೀಟರ್‌ನಲ್ಲಿ ಬರೆದುಕೊಂಡಿ ದ್ದಾರೆ.

‘ಶುಕ್ರವಾರ ನಾವು ಅಟ್ಲಾಂಟಾದ ಶ್ರೀ ಶಕ್ತಿ ಮಂದಿರಕ್ಕೆ ಹೋದೆವು. ಅಲ್ಲಿ ಗರ್ಬಾ ನೃತ್ಯ ಏರ್ಪಡಿಸಲಾಗಿತ್ತು. ಆದರೆ ನಮ್ಮನ್ನು ಮಂದಿರದ ಪ್ರವೇಶದಲ್ಲೇ ತಡೆಯಲಾಯಿತು. ‘ನೀವು ಹಿಂದೂವಿನ ಥರ ಕಾಣುತ್ತಿಲ್ಲ. ಅಲ್ಲದೆ, ನಿಮ್ಮ ಉಪನಾಮ ‘ಜಾನಿ’ ಕೂಡ ಹಿಂದೂ ಉಪನಾಮವನ್ನು ಹೋಲುತ್ತಿಲ್ಲ. ಹೀಗಾಗಿ ನಿಮಗೆ ಪ್ರವೇಶ ನೀಡಲಾಗದು’ ಎಂದು ಕಾರ್ಯಕ್ರಮ ಸಂಘಟಕರು ಹೇಳಿದರು. 

ಈಗಲ್ಲ, ಕಳೆದ 6 ವರ್ಷದಿಂದ ನಾನು ಆ ದೇವಾಲಯಕ್ಕೆ ಹೋಗುತ್ತಿದ್ದೇನೆ. ಈ ರೀತಿ ಏಕಾಏಕಿ ಪ್ರವೇಶ ನಿರಾಕರಣೆ ನನಗೆ ಆಘಾತ ತಂದಿದೆ’ ಎಂದು ಜಾನಿ ಹೇಳಿದ್ದಾರೆ. ಇದೇ ವೇಳೆ ತಮ್ಮ ಕೊಂಕಣಿ-ಕನ್ನಡತಿ ಸ್ನೇಹಿತೆಗೆ ಆದ ಅವಮಾನದ ಬಗ್ಗೆಯೂ ಜಾನಿ ಬರೆದಿದ್ದಾರೆ. ‘ಗರ್ಬಾ ನೃತ್ಯ ಗುಜರಾತಿಗಳ ಸ್ಪೆಷಲ್. ಇದನ್ನು ವೀಕ್ಷಿಸುವ ಕೌತುಕದಿಂದ ನನ್ನ ಸ್ನೇಹಿತೆ ಕೂಡ ದೇವಾಲಯಕ್ಕೆ ಆಗಮಿಸಿದ್ದರು. 

ಸ್ನೇಹಿತೆಯನ್ನು ಗಮನಿಸಿದ ಸಂಘಟಕರು, ‘ನಾವು ನಿಮ್ಮ ಕಾರ್ಯಕ್ರಮಕ್ಕೆ ಬರಲ್ಲ, ನೀವು ನಮ್ಮ ಕಾರ್ಯಕ್ರಮಕ್ಕೆ ಬರಬೇಡಿ’ ಎಂದರು. ಅಚ್ಚರಿಗೊಂಡ ನನ್ನ ಸ್ನೇಹಿತೆ, ‘ನನ್ನ ಉಪನಾಮ (ಅಡ್ಡಹೆಸರು) ಮುರ್ಡೇಶ್ವರ ಅಂತ. ನಾನು ಕನ್ನಡ-ಮರಾಠಿ’ ಎಂದು ಉತ್ತರಿಸಿದರು. ‘ಆಗ ಸಂಘಟಕರು, ‘ಕನ್ನಡ ಎಂದರೇನು? ನೀನು ಇಸ್ಮಾಯಿಲಿ (ಇಸ್ಲಾಂ ಧರ್ಮೀಯಳು) ಎಂದು ಅವಮಾನಿಸಿದರು’ ಎಂದು ಕರಣ್ ಜಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Follow Us:
Download App:
  • android
  • ios