ಬೆಂಗಳೂರು(ಸೆ.16): ರಾಜ್ಯದ ಐಜಿ ಡಿ. ರೂಪಾ ಅವರಿಗೆ ರಾಷ್ಟ್ರಪತಿಗಳ ಪದಕ ನೀಡಿ ಗೌರವಿಸಲಾಯಿತು. ರಾಜಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ಆರ್. ವಾಲಾ ಅವರು ರೂಪಾ ಅವರಿಗೆ ರಾಷ್ಟ್ರಪತಿಗಳ ಪದಕ ನೀಡಿ ಗೌರವಿಸಿದರು.

ಕೆಲವು ದಿನಗಳ ಹಿಂದಷ್ಟೆ ಐಎಡಿಎಂಕೆಯ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರಿಗೆ ಪರಪ್ಪನ ಅಗ್ರಹಾರದಲ್ಲಿ ವಿಐಪಿ ಆತಿಥ್ಯ ನೀಡಲಾಗುತ್ತಿದೆ ಎಂದು ಆರೋಪಿಸಿ ಡಿಜಿಪಿ ಅವರಿಗೆ ದೂರು ನೀಡಿ ರಾಜ್ಯದಾದ್ಯಂತ ಸುದ್ದಿಯಾಗಿದ್ದರು.

ಸರ್ಕಾರ ಆರೋಪ ಮಾಡಿದ್ದ ಸತ್ಯನಾರಾಯಣ್ ರಾವ್ ಅವರನ್ನು ಕಡ್ಡಾಯ ರಜೆ ಹಾಗೂ ಡಿ. ರೂಪಾ ಅವರನ್ನು ಸಂಚಾರಿ ವಿಭಾಗದ ಆಯುಕ್ತರನ್ನಾಗಿ ವರ್ಗಾವಣೆ ಮಾಡಿತ್ತು. ಮೂಲತಃ ದಾವಣಗೆರೆಯವರಾದ ರೂಪಾ 2000ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 43ನೇ ರಾಂಕ್ ಪಡೆದು ತೇರ್ಗಡೆಯಾಗಿದ್ದರು.