ಕರ್ನಾಟಕ ಸರ್ಕಾರದಲ್ಲಿ ವೃತ್ತಿಪರವಾದ ಆಡಳಿತ ಇಲ್ಲವಾಗಿದೆ. ನಿಯಮಗಳ ವಿರುದ್ಧವಾಗಿ ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡುವುದರಲ್ಲಿ ಸರ್ಕಾರ ತುಂಬಾ ಫೇಮಸ್. ನಿಯಮಾನುಸರ ವರ್ಗಾವಣೆ ಮಾಡುವಂತೆ ಹಲವು ಬಾರಿ ನ್ಯಾಯಾಲಯ ಹೇಳಿದ್ದರೂ ಸರ್ಕಾರ ಮಾತ್ರ ತನ್ನ ತಪ್ಪು ತಿದ್ದಿಕೊಳ್ಳುತ್ತಿಲ್ಲ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಬೆಂಗಳೂರು (ಡಿ.12): ಕರ್ನಾಟಕ ಸರ್ಕಾರದಲ್ಲಿ ವೃತ್ತಿಪರವಾದ ಆಡಳಿತ ಇಲ್ಲವಾಗಿದೆ. ನಿಯಮಗಳ ವಿರುದ್ಧವಾಗಿ ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡುವುದರಲ್ಲಿ ಸರ್ಕಾರ ತುಂಬಾ ಫೇಮಸ್. ನಿಯಮಾನುಸರ ವರ್ಗಾವಣೆ ಮಾಡುವಂತೆ ಹಲವು ಬಾರಿ ನ್ಯಾಯಾಲಯ ಹೇಳಿದ್ದರೂ ಸರ್ಕಾರ ಮಾತ್ರ ತನ್ನ ತಪ್ಪು ತಿದ್ದಿಕೊಳ್ಳುತ್ತಿಲ್ಲ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಕನಕಪುರ ತಾಲೂಕು ದೊಡ್ಡ ಮರಳವಾಡಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಆಗಿ ಕೆಲಸ ಮಾಡುತ್ತಿದ್ದ ತಮ್ಮನ್ನು ಅವಧಿಗೆ ಮುನ್ನವೇ ವರ್ಗಾವಣೆ ಮಾಡಲಾಗಿದೆ. ಅಲ್ಲದೆ, ವರ್ಗಾವಣೆ ಮಾಡಿದ ಮೇಲೆ ತಮಗೆ ಬೇರೊಂದು ಸ್ಥಳ ತೋರಿಸಿಲ್ಲ ಎಂದು ಆರೋಪಿಸಿ ರಂಗೇಗೌಡ ಎಂಬುವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ ಕುಮಾರ್ ಅವರಿದ್ದ ವಿಭಾಗೀಯ ಪೀಠ, ಸರ್ಕಾರವು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡುತ್ತದೆ. ನಾವೇನೂ ಸುಳ್ಳು ಹೇಳುತ್ತಿಲ್ಲ. ಇದೆಲ್ಲವನ್ನು ನೋಡುತ್ತಿದ್ದರೆ ಸರ್ಕಾರಕ್ಕೆ ಸರಿಯಾಗಿ ಕಾನೂನು ಸಲಹೆ ನೀಡುವವರು ಇಲ್ಲ ಎಂಬುದಾಗಿ ನಮಗೆ ಕಾಣುತ್ತದೆ.
ಅದಕ್ಕೆ ಪದೇ ಪದೇ ನಿಯಮಗಳನ್ನು ಗಾಳಿಗೆ ತೂರಿ ವರ್ಗಾವಣೆ ಮಾಡುತ್ತಲೇ ಇರುತ್ತದೆ. ಇದರಿಂದ ಸರ್ಕಾರದ ಆಡಳಿತದಲ್ಲಿ ವೃತ್ತಿ ಪರತೆ ಇಲ್ಲ ಎಂದು ತೋರುತ್ತದೆ. ಯಾವಾಗಲೂ ಇದೇ ಕಥೆಯಾಗಿದೆ ಎಂದು ಹೇಳಿತು.
