ದಾವಣಗೆರೆ :   ಕಾಂಗ್ರೆಸ್ ಅತೃಪ್ತ ನಾಯಕ ರಮೇಶ್ ಜಾರಕಿಹೊಳಿ ಸದ್ಯ ತಟಸ್ಥವಾಗಿದ್ದು ಅವರ ಮುಂದಿನ ನಡೆ ಬಗ್ಗೆ ಗೊತ್ತಿಲ್ಲ ಎಂದು ರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. 

ದಾವಣಗೆರೆಯ ರಾನಹಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಸತಿಶ್ ಜಾರಕಿಹೊಳಿ  ಯಾರಿಂದಲೂ ಕೂಡ ರಾಜ್ಯ ಸರ್ಕಾರಕ್ಕೆ ಸಮಸ್ಯೆ ಎದುರಾಗದು. ನಾಲ್ಕು ವರ್ಷಗಳ ಕಾಲ ಸರ್ಕಾರ ಸುಭದ್ರವಾಗಿರಲಿದೆ ಎಂದು ಹೇಳಿದರು. 

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ನಾಲ್ಕು ವರ್ಷ ಪೂರೈಸುತ್ತಾರೆ. ಶೀಘ್ರ ಸಂಪುಟ ವಿಸ್ತರಣೆಗೆ ನಿರ್ಧರಿಸಿದ್ದು, ಇದರಿಂದ ಸರ್ಕಾರಕ್ಕೆ ಯಾವುದೇ ರೀತಿಯ ಅಪಾಯವಿಲ್ಲ. ಸಂಪುಟ ವಿಸ್ತರಣೆ ನಂತರ ಉಂಟಾಗುವ ಭಿನ್ನಮತವನ್ನು ನಮ್ಮ ಹೈ ಕಮಾಂಡ್ ನಿಭಾಯಿಸುತ್ತದೆ ಎಂದರು. 

ಇನ್ನು ಯಾವುದೇ ರೀತಿಯ ಏಳುಬೀಳುಗಳು ಸಂಭವಿಸಿದರೂ ಸರ್ಕಾರ ಸುಭದ್ರವಾಗಿ ತನ್ನ ಅವಧಿ ಪೂರೈಸಲಿದೆ ಎಂದರು.