ಬೆಂಗಳೂರು, (ಮೇ.31) : ಲೋಕಸಭಾ ಚನಾವಣೆಯ ನೀತಿ ಸಂಹಿತಿ ಮುಗಿಯುತ್ತಿದ್ದಂತೆಯೇ ರಾಜ್ಯ ಮೈತ್ರಿ ಸರ್ಕಾರ ಬರೋಬ್ಬರಿ 16 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಚುನಾವಣೆ ವೇಳೆ ವರ್ಗಾವಣೆಗೊಂಡಿದ್ದ ಮಂಜುಶ್ರೀ ಮತ್ತೇ ಮಂಡ್ಯ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದಾರೆ. ಲೋಕಸಭಾ ಚುನಾವಣೆ ವೇಳೆ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಿಂಧು ಪ್ರಕರಣದಲ್ಲಿ ಮಂಜುಶ್ರೀ ಸಂಶಯಕ್ಕೊಳಗಾಗಿದ್ದರು.

ಇದನ್ನು ಪ್ರಶ್ನಿಸಿ ಸುಮಲತಾ ಅಂಬರೀಶ್ ಅವರು ಚುನಾವಣಾ ಆಯೋಗದ ಮೊರೆ ಹೋಗಿದ್ದರು.ಈ ಹಿನ್ನೆಲೆಯಲ್ಲಿ ಮಂಜುಶ್ರೀ ಅವರನ್ನು ಚುನಾವಣಾಧಿಕಾರಿಯ ಆದೇಶದಂತೆ ರಾಜ್ಯ ಸರ್ಕಾರದ ಕಾರ್ಯದರ್ಶಿ ವರ್ಗಾವಣೆ ಮಾಡಿ ಆದೇಶಸಿದ್ದರು. ಇದೀಗ ರಾಜ್ಯ ಸರ್ಕಾರ ಮತ್ತೆ ಮಂಜುಶ್ರೀ ಅವರನ್ನು ಮಂಡ್ಯಕ್ಕೆ ವರ್ಗಾಹಿಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

16 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಪಟ್ಟಿ ಇಲ್ಲಿದೆ.

1.ತುಷಾರ ಗಿರಿನಾಥ್ - ಅಧ್ಯಕ್ಷರು, ಬಿಡಬ್ಲುಎಸ್ ಎಸ್ ಬಿ.
2.ಟಿ.ಕೆ.ಅನಿಲ್ ಕುಮಾರ್- ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ.
3.ಡಾ.ಪಿ.ಸಿ.ಜಾಫರ್- ಆಯುಕ್ತರು, ಪಬ್ಲಿಕ್ ಇನ್ಸ್ ಸ್ಟ್ರಕ್ಷನ್.
4.ಶಿವಯೋಗಿ ಸಿ.ಕಳಸದ- ಎಂ.ಡಿ. KSRTC (.ಬೆಂಗಳೂರು ಪ್ರಾದೇಶಿಕ ಆಯುಕ್ತರಾಗಿಯೂ ಶಿವಯೋಗಿ ಕಳಸದ ಮುಂದುವರಿಕೆ).
5.ಡಾ.ವಿಶಾಲ್ ಆರ್ - ಆಯುಕ್ತರು, ಗ್ರಾಮೀಣ ನೀರು ಮತ್ತು ಒಳಚರಂಡಿ ಸಂಸ್ಥೆ.
6.ಡಾ.ಲೋಕೇಶ್ ಎಂ.- ವಿಶೇಷ ಆಯುಕ್ತರು, ಬಿಬಿಎಂಪಿ.
7.ಡಿ ರಣದೀಪ್- ಹೆಚ್ಚುವರಿ ಆಯುಕ್ತರು, ಬಿಬಿಎಂಪಿ.
8.ಎಸ್ ಎಸ್ ನಕುಲ್- ನಿರ್ದೇಶಕರು, ಮಾಹಿತಿ ತಂತ್ರಜ್ಞಾನ, ಬಯೋ ಟೆಕ್ನಾಲಜಿ ಇಲಾಖೆ.
9.ಎಂ.ಕನಗ ವಲ್ಲಿ- ಆಯುಕ್ತರು, ಗ್ರಾಮೀಣಾಭಿವೃದ್ಧಿ ಇಲಾಖೆ.
10.ಮಂಜುಶ್ರೀ ಎನ್ - ಮಂಡ್ಯ ಜಿಲ್ಲಾಧಿಕಾರಿ. 
11.ಡಾ.ಎಸ್.ಬಿ.ಬೊಮ್ಮನಹಳ್ಳಿ- ಬೆಳಗಾವಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆ.
12.ಡಾ.ಅವಿನಾಶ್  ಮೆನನ್ ರಾಜೇಂದ್ರನ್ - ಹೆಚ್ಚುವರಿ ಆಯುಕ್ತರು, ವಾಣಿಜ್ಯ ತೆರಿಗೆ.
13.ಲಕ್ಷ್ಮೀಕಾಂತ್ ರೆಡ್ಡಿ- ಹುದ್ದೆ ನೀಡದೇ ಡಿಪಿಎಆರ್ ಗೆ ವರ್ಗಾವಣೆ.
14.ಪಾಟೀಲ್ ಯಲಗೌಡ ಶಿವನಗೌಡ- ವಿಜಯಪುರ ಜಿಲ್ಲಾಧಿಕಾರಿ.
15.ವಿ.ಯಶವಂತ    - ಪ್ರಾದೇಶಿಕ ಆಯುಕ್ತರು, ಮೈಸೂರು.
16.ಪಿ.ಎ.ಮೇಘಣ್ಣವರ್- ಪ್ರಾದೇಶಿಕ ಆಯುಕ್ತರು, ಬೆಳಗಾವಿ.