ಬೆಂಗಳೂರು [ಸೆ.17]:  ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 73 ಪೊಲೀಸ್‌ ಇನ್‌ಸ್ಪೆಕ್ಟರ್‌ಗಳನ್ನು (ಸಿವಿಲ್‌) ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಈ ಪೈಕಿ 15 ಮಂದಿ ನಗರದ ಇನ್‌ಸ್ಪೆಕ್ಟರ್‌ಗಳು ಸೇರಿದ್ದಾರೆ.

ವರ್ಗಾವಣೆ ಆದೇಶದಲ್ಲಿ ಸ್ಥಳ ನಿಯುಕ್ತಿಗೊಳ್ಳದ ಅಧಿಕಾರಿಗಳು ಮುಂದಿನ ಸ್ಥಳ ನಿರೀಕ್ಷಣೆಗಾಗಿ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಪ್ರಧಾನ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಬೆಂಗಳೂರು ವರ್ಗಾವಣೆ ಪಟ್ಟಿ

ಕೆ.ಶಂಕರಚಾರಿ- ಸಿದ್ಧಾಪುರ, ರಾಮಪ್ಪ ಬಿ.ಗುತ್ತೇರ್‌- ತಲಘಟ್ಟಪುರ, ಪಿ.ಶಿವಸ್ವಾಮಿ- ಕೆಂಗೇರಿ ಸಂಚಾರ ಪೊಲೀಸ್‌ ಠಾಣೆ, ರವಿಕುಮಾರ್‌- ಬಿಡಿಎ, ಆರ್‌.ವಿಜಯಕುಮಾರ್‌- ಕೆಂಗೇರಿ, ಜಿ.ಟಿ.ಶ್ರೀನಿವಾಸ- ಬಸವೇಶ್ವರ ನಗರ, ಅಂಜುಮಾಲ ತಿಮ್ಮಣ್ಣ ನಾಯಕ್‌- ಸಿಸಿಬಿ, ಎಚ್‌.ಜಯರಾಜ್‌- ಮಾಜಿ ಪ್ರಧಾನಮಂತ್ರಿಗಳ ಭದ್ರತೆ, ಜಿ.ಎಂ.ಶಿವರಾಮ್‌- ಸಿಸಿಆರ್‌ಬಿ, ಎಂ.ಜೆ.ದಯಾನಂದ- ಬಸವನಗುಡಿ (ಮಹಿಳಾ ಪೊಲೀಸ್‌ ಠಾಣೆ), ಅಜೀಜ್‌ ಕಲಾದಗಿ- ಲೋಕಾಯುಕ್ತ, ಭೀಮನಗೌಡ ಎ.ಬಿರದಾರ್‌- ಲೋಕಾಯುಕ್ತ, ಮಹಾನಂದ- ಸಿಐಡಿ, ಬಿ.ಪ್ರಮೋದ್‌ ಕುಮಾರ್‌- ಹೈಕೋರ್ಟ್‌ ಜಾಗೃತ ದಳ, ಕೆ.ವಿಶ್ವನಾಥ್‌- ಜಿಗಣಿ ಅವರನ್ನು ವರ್ಗಾವಣೆಗೊಳಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ