ಮೈಸೂರು [ಜು.14]: ಸರ್ಕಾರ ಸದ್ಯಕ್ಕೆ ಸುಭದ್ರವಾಗಿದೆ. ಆದರೆ, ಐದು ವರ್ಷ ಇರುತ್ತದೆ ಅಂತ ಹೇಳಲು ಆಗಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಭಯ, ಆತಂಕ ಇದ್ದೇ ಇರುತ್ತದೆ. ಆದರೆ, ಸದ್ಯ ನಮಗೆ ಭಯ ಇಲ್ಲ. ಸರ್ಕಾರ ಸುಭದ್ರವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಶ್ವಾಸ ಮತಯಾಚನೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಇದನ್ನು ರಾಷ್ಟ್ರಕ್ಕೆ ಕೇಳುವ ಹಾಗೆ ಹೇಳಿದ್ದಾರೆ. ಎಂಟಿಬಿ ನಾಗರಾಜ್‌ ಅವರು ವಾಪಸ್‌ ಬರುತ್ತಾರೆ ಎಂಬ ವಿಚಾರ ಗೊತ್ತಿಲ್ಲ. ಅದನ್ನು ತಿಳಿದುಕೊಂಡು ಮಾತನಾಡುತ್ತೇನೆ. ಮತ್ತೆ ನಾವು ಮುಂಬೈಗೆ ಹೋಗಬೇಕಾಗಿಲ್ಲ. ಇನ್ಮೇಲೆ ಎಲ್ಲಾ ಇಲ್ಲೆ ನಡೆಯುತ್ತದೆ ಎಂದು ಹೇಳಿದರು.