ಬೆಳಗಾವಿ ಗಡಿ ವಿಚಾರವಾಗಿ ಮುಂದಿನ ಜನವರಿ ತಿಂಗಳಲ್ಲಿ ಸುಪ್ರೀಂಕೋರ್ಟ್'ನಲ್ಲಿ ವಾದ ಮಂಡನೆ ನಡೆಯಲಿದೆ. ಆದರೆ, ಗಡಿ ಹೋರಾಟಕ್ಕೆ ಶಕ್ತಿ ತುಂಬಲಿರುವ ಗಡಿ ಸಂರಕ್ಷಣಾ ಆಯೋಗದ ಪ್ರಾದೇಶಿಕ ಕಚೇರಿಯನ್ನ ಬೆಳಗಾವಿಯಲ್ಲಿ ಸ್ಥಾಪಿಸುವ ಭರವಸೆಯನ್ನು ಮಾತ್ರ ಸರ್ಕಾರ ಇನ್ನೂ ಈಡೇರಿಲ್ಲ.
ಬೆಂಗಳೂರು(ನ.01): ಗಡಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಮಾತಿಗೆ ಬದ್ಧ ಎಂದೇ ಸರ್ಕಾರಗಳು ಹೇಳಿಕೊಳ್ಳುತ್ತವೆ. ಆದರೆ ವಾಸ್ತವದಲ್ಲಿ ಕರ್ನಾಟಕ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ತೋರಿಸುವಷ್ಟು ಆಸಕ್ತಿ ತೋರಿಸುತ್ತಿಲ್ಲ. ಇದಕ್ಕೊಂದು ಸ್ಪಷ್ಟ ನಿದರ್ಶನವೇ ಗಡಿ ಸಂರಕ್ಷಣಾ ಆಯೋಗವನ್ನ ಬೆಳಗಾವಿಯಲ್ಲಿ ಸ್ಥಾಪಿಸುವ ವಿಚಾರ.
ಬೆಳಗಾವಿ ಗಡಿ ವಿಚಾರವಾಗಿ ಮುಂದಿನ ಜನವರಿ ತಿಂಗಳಲ್ಲಿ ಸುಪ್ರೀಂಕೋರ್ಟ್'ನಲ್ಲಿ ವಾದ ಮಂಡನೆ ನಡೆಯಲಿದೆ. ಆದರೆ, ಗಡಿ ಹೋರಾಟಕ್ಕೆ ಶಕ್ತಿ ತುಂಬಲಿರುವ ಗಡಿ ಸಂರಕ್ಷಣಾ ಆಯೋಗದ ಪ್ರಾದೇಶಿಕ ಕಚೇರಿಯನ್ನ ಬೆಳಗಾವಿಯಲ್ಲಿ ಸ್ಥಾಪಿಸುವ ಭರವಸೆಯನ್ನು ಮಾತ್ರ ಸರ್ಕಾರ ಇನ್ನೂ ಈಡೇರಿಲ್ಲ.
ಕನ್ನಡಪರ ಸಂಘಟನೆಗಳ ಹೋರಾಟದ ಫಲವಾಗಿ ಗಡಿ ಸಂರಕ್ಷಣಾ ಆಯೋಗವನ್ನು ಸರ್ಕಾರ ರಚಿಸಿತು. ಮೊದಲ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ವಿ.ಎಸ್.ಮಳೀಮಠ, ಕೆಲವೊಂದಿಷ್ಟು ಆರೋಗ್ಯಕರ ಚರ್ಚೆ, ಮಹತ್ವದ ಸಭೆಗಳು ಕೂಡ ಬೆಳಗಾವಿಯಲ್ಲಿ ನಡೆದವು. ಮಳೀಮಠ ಕಾಲವಾದ ಬಳಿಕ ಹೊಸದಾಗಿ ಆಯೋಗದ ಅಧ್ಯಕ್ಷರಾಗಿ ರಾಜೇಂದ್ರ ಬಾಬು ಅವರನ್ನು ಸರ್ಕಾರ ನೇಮಕಗೊಳಿಸಿದೆ. ಆದರೆ, ರಾಜೇಂದ್ರ ಬಾಬು ಈವರೆಗೂ ಎಂಇಎಸ್ ಉಪಟಳದ ಬೆಳಗಾವಿಯತ್ತ ಮುಖವನ್ನೇ ಮಾಡಿಲ್ಲ. ಇನ್ನು ಸುಪ್ರೀಂ ಕೋರ್ಟ್'ನಲ್ಲಿ ದಾಖಲೆಗಳ ಸಂಗ್ರಹ, ಸಾಕ್ಷಿ ಸಿದ್ಧತೆಯಂತಹ ಕಾರ್ಯಗಳು ನಡೆಯಬೇಕಿದೆ. ಈ ಪ್ರಾದೇಶಿಕ ಕಚೇರಿ ಬೆಳಗಾವಿಯಲ್ಲಿ ಸ್ಥಾಪಿಸುವುದರಿಂದ ಗಡಿ ಹೋರಾಟಕ್ಕೆ ಅನುಕೂಲವಾಗಲಿದೆ ಎನ್ನುವುದು ಕನ್ನಡಿಗರ ಒತ್ತಾಸೆ. ಒಟ್ಟಿನಲ್ಲಿ ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದೆ ಹೋದರೆ ನಮ್ಮ ಬೆಳಗಾವಿ ಮಹಾರಾಷ್ಟ್ರದ ಪಾಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.