ಸಾಲ ಮನ್ನಾಕ್ಕೆ ಯಡಿಯೂರಪ್ಪ ದಿನ ನಿಗದಿ ಮಾಡಿದರೆ ಹೇಗೆ ಎಂದು ಸಣ್ಣ ಕೖಗಾರಿಕಾ ಸಚಿವ  ಶ್ರೀನಿವಾಸ್ ಹೇಳಿಕೆ  ಪ್ರಶ್ನೆ ಮಾಡಿದ್ದಾರೆ.ರಾಜ್ಯ ಸರಕಾರ ರೈತರಿಗೆ ನೀಡಿದ ಮಾತನ್ನು ತಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು[ಜೂನ್ 15]  ಸಾಲ ಮನ್ನಾಕ್ಕೆ ಯಡಿಯೂರಪ್ಪ ದಿನ ನಿಗದಿ ಮಾಡಿದರೆ ಹೇಗೆ ಎಂದು ಸಣ್ಣ ಕೈಗಾರಿಕಾ ಸಚಿವ ಶ್ರೀನಿವಾಸ್ ಪ್ರಶ್ನೆ ಮಾಡಿದ್ದಾರೆ.ರಾಜ್ಯ ಸರಕಾರ ರೈತರಿಗೆ ನೀಡಿದ ಮಾತನ್ನು ತಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಹೀಗಾಗಿ ಹೋರಾಟ ಎಂಬ ಹೆಸರಿನಲ್ಲಿ ಗೊಂದಲ ಸೃಷ್ಟಿಸುವ ಯತ್ನ ಮಾಡುತ್ತಿದ್ದಾರೆ ಸಾಲ ಮನ್ನಾ ಏಕಾ ಏಕಿ ಮಾಡೋದು ಅಷ್ಟು ಸುಲಭನಾ? ಎಂದರು.

ಸಾಲ ಮನ್ನಾಕ್ಕೆ ರಾಜ್ಯ ಬಜೆಟ್ ನ ಅರ್ಧದಷ್ಟು ಹಣ ಹೊಂದಿಸಬೇಕು. 50 ಸಾವಿರ ಕೋಟಿ ಸಾಲ ಮನ್ನಾ ಮಾಡಬೇಕು. ಅದಕ್ಕೆ ಸಂಪನ್ಮೂಲಗಳ ಕ್ರೋಢಿಕರಣ ಆಗಬೇಕು ಎಂದು ಹೇಳಿದರು. ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಆಗಿದೆ. ಸರಕಾರ ಸಾಲ ಮನ್ನಾ ಮಾಡುವ ಮಾತಿಗೆ ಬದ್ಧವಾಗಿದೆ ಎಂದು ಹೇಳಿದರು.