ಬೆಂಗಳೂರು[ಜು. 21] 'ನಾಳೆ ಮತ್ತೆ ಸದನದಲ್ಲಿ ಚಂದ್ರಗುಪ್ತ ಮೌರ್ಯನ ಕಾಲದಿಂದ ಇವತ್ತಿನ ತನಕ ಕಥೆ ಹೇಳಿ ಸದನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬಾರದು ಎಂದು ಎಲ್ಲಾ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಲ್ಲೂ ಮತ್ತು ಮೇಧಾವಿಗಳಾದ ಸಮನ್ವಯ ಸಮಿತಿ ಅಧ್ಯಕ್ಷರಲ್ಲೂ ನನ್ನ ಕಳಕಳಿಯ ವಿನಂತಿ’ 

ಹೀಗೆ ಟ್ವೀಟ್ ಮಾಡಿರುವುದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ.  ಈ ರೀತಿ ಹೇಳುವ ಮೂಲಕ ನಾಳಿನ ಅಂದರೆ ಸೋಮವಾರದ ಅಧಿವೇಶನದಲ್ಲಿ ಕಾಲಹರಣ ಮಾಡಬೇಡಿ  ಎಂದು ಕೇಳಿಕೊಂಡಿದ್ದಾರೆ.

ಫೆವಿಕಾಲ್ ಕಂಪನಿಗೆ ಆಪದ್ಭಾಂಧವ ಅಂಬಾಸಿಡರ್ ಹುಡುಕಿದ ಈಶ್ವರಪ್ಪ

ಶುಕ್ರವಾರವೂ ವಿಶ್ವಾಸಮತ ಸಾಬೀತು ಮಾಡುವ ಪ್ರಕ್ರಿಯೆ ನಡೆಯಲಿಲ್ಲ. ವಿಶ್ವಾಸಮತದ ಮೇಲಿನ ಚರ್ಚೆ ಪೂರ್ಣಗೊಳ್ಳದ ಕಾರಣ ಸ್ಪೀಕರ್ ರಮೇಶ್ ಕುಮಾರ್ ಸದನವನ್ನು ಸೋಮವಾರಕ್ಕೆ ಮುಂದೂಡಿದ್ದರು.

ಶುಕ್ರವಾರ ಟ್ವೀಟ್ ಮಾಡಿದ್ದ ಕೆಎಸ್ಇ "ಫೆವಿಕಾಲ್ ಕಂಪನಿಯವರು ಬ್ರಾಂಡ್ ಅಂಬಾಸಿಡರ್ ಹುಡುಕಾಟದಲ್ಲಿ ಇದ್ದಾಗ ಆಪದ್ಭಾಂಧವರಾಗಿ ಸಿಕ್ಕಿದ್ದು ನಮ್ಮ ಮುಖ್ಯಮಂತ್ರಿಗಳು" ಎಂದು ವ್ಯಂಗ್ಯದ ಏಟು ನೀಡಿದ್ದರು.