ಮದುವೆ ನಡೆಯುತ್ತಿದ್ದಾಗ ಕಲ್ಯಾಣ ಮಂಟಪಕ್ಕೆ ನೆರೆ| ವಿವಾಹ ಸ್ಥಳಾಂತರ!| ಅತಿಥಿಯಂತೆ ಆಗಮಿಸಿದ ನೀರು| ಬೆಚ್ಚಿದ ಗಂಡು-ಹೆಣ್ಣು

ಟಿ.ನರಸೀಪುರ[ಆ.12]: ಹಳೇ ತಿರುಮಕೂಡಲಿನ ಮೈಸೂರು ರಸ್ತೆಯವರೆಗೂ ಕಪಿಲಾ ನದಿಯ ಪ್ರವಾಹ ವ್ಯಾಪಿಸಿದ್ದರಿಂದ ಶ್ರೀನಿವಾಸ ಕನ್ವೆನ್ಷನ್‌ ಹಾಲ್‌ ನೀರಿನಲ್ಲಿ ಮುಳುಗಿದ್ದರಿಂದ ಮದುವೆ ಮತ್ತೊಂದು ಕಲ್ಯಾಣ ಮಂಟಪಕ್ಕೆ ಸ್ಥಳಾಂತರಗೊಂಡಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಚಾಮರಾಜನಗರದ ರಾಮಸಮುದ್ರದ ವರನಿಗೂ ಹಾಗೂ ತಾಲೂಕಿನ ದೊಡ್ಡಪುರ ಗ್ರಾಮದ ವಧುವಿಗೂ ವಿವಾಹ ನಿಶ್ಚಯವಾಗಿತ್ತು. ರಾತ್ರಿಯಿಡೀ ಕಲ್ಯಾಣ ಮಂಟಪದಲ್ಲಿಯೇ ವಧು-ವರರು ಇದ್ದರಾದರೂ ಬೆಳಗಾಗುವ ಹೊತ್ತಿಗೆ ಕಲ್ಯಾಣ ಮಂಟಪಕ್ಕೆ ಪ್ರವಾಹ ಅತಿಥಿಯಂತೆ ಆಗಮಿಸಿದ್ದರಿಂದ ಬೆಚ್ಚಿದ ಹೆಣ್ಣು-ಗಂಡಿನ ಕಡೆಯವರಿಬ್ಬರೂ ಎಚ್ಚೆತ್ತುಕೊಂಡು ಜೋಡಿ ರಸ್ತೆಯಲ್ಲಿರುವ ಶ್ರೀ ಮಹದೇಶ್ವರ ಕಲ್ಯಾಣ ಮಂಟಪಕ್ಕೆ ವಿವಾಹವನ್ನೇ ಸ್ಥಳಾಂತರಿಸಿದರು.

ಮಧ್ಯಾಹ್ನ ವೇಳೆಗೆ ಶ್ರೀನಿವಾಸ ಕನ್ವೆನ್ಷನ್‌ ಹಾಲ್‌ ನೆರೆ ನೀರಿನಿಂದ ಆವೃತವಾಯಿತು.