Asianet Suvarna News Asianet Suvarna News

ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಯಾರ್ಯಾರಿಗೆ ಸ್ಥಾನ?

ಕಾಂಗ್ರೆಸ್ ಸಚಿವ ಸಂಪುಟ ಸರ್ಕಸ್ ನಡೆಯುತ್ತಿದೆ. ಪಕ್ಷದಲ್ಲಿ ಅಸಮಾಧಾನ ಹೊಗೆಯಾಡದಿರುವಂತೆ ನೋಡಿಕೊಳ್ಳಲು ಹೈಕಮಾಂಡ್ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ನಾಯಕರು ಡಿಸಿಎಂ ಪರಮೇಶ್ವರ್ ಸೇರಿದಂತೆ  20 ಸ್ಥಾನಗಳಿಗೆ ಸಚಿವರ ಪಟ್ಟಿಯನ್ನು  ಹೈಕಮಾಂಡ್ ಮುಂದಿಟ್ಟಿದೆ. ಅಸಮಾಧಾನದ ಹಿನ್ನೆಲೆಯಲ್ಲಿ 17 ಸ್ಥಾನಗಳನ್ನ ಮಾತ್ರ ತುಂಬಲು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿದೆ. 

Karnataka Congress Submit a list of ministers to Rahul Gandhi

ಬೆಂಗಳೂರು (ಜೂ. 05): ಕಾಂಗ್ರೆಸ್ ಸಚಿವ ಸಂಪುಟ ಸರ್ಕಸ್ ನಡೆಯುತ್ತಿದೆ. ಪಕ್ಷದಲ್ಲಿ ಅಸಮಾಧಾನ ಹೊಗೆಯಾಡದಿರುವಂತೆ ನೋಡಿಕೊಳ್ಳಲು ಹೈಕಮಾಂಡ್ ಪ್ರಯತ್ನಿಸುತ್ತಿದೆ. 

ಕಾಂಗ್ರೆಸ್ ನಾಯಕರು ಡಿಸಿಎಂ ಪರಮೇಶ್ವರ್ ಸೇರಿದಂತೆ  20 ಸ್ಥಾನಗಳಿಗೆ ಸಚಿವರ ಪಟ್ಟಿಯನ್ನು  ಹೈಕಮಾಂಡ್ ಮುಂದಿಟ್ಟಿದೆ. ಅಸಮಾಧಾನದ ಹಿನ್ನೆಲೆಯಲ್ಲಿ 17 ಸ್ಥಾನಗಳನ್ನ ಮಾತ್ರ ತುಂಬಲು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿದೆ.  ಅತೃಪ್ತರಿಗೆ ಆಸೆ ತೋರಿಸಲು ನಾಲ್ಕು ಸ್ಥಾನ ಖಾಲಿ ಬಿಡಲು ಕಾಂಗ್ರೆಸ್ ಆಲೋಚನೆ ಮಾಡಿದೆ.  ರಾಜ್ಯ ಕಾಂಗ್ರೆಸ್ ನಾಯಕರು ಸಿದ್ಧಪಡಿಸಿರುವ ಪಟ್ಟಿ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರಾಜ್ಯ ಕಾಂಗ್ರೆಸ್ ನಾಯಕರು ಇದೇ ಪಟ್ಟಿ ನೀಡಲಿದ್ದಾರೆ. 

ಯಾರ್ಯಾರಿದ್ದಾರೆ ಪಟ್ಟಿಯಲ್ಲಿ? 

1 .ಡಿಕೆ ಶಿವಕುಮಾರ್- ಒಕ್ಕಲಿಗ

2.  ಕೃಷ್ಣ ಬೈರೇಗೌಡ /ಡಾ .ಸುಧಾಕರ್ - ಒಕ್ಕಲಿಗ

3. ಹನೂರ್ ನಾಗೇಂದ್ರ /ಎಸ್ ಟಿ ಸೋಮಶೇಖರ್ - ಒಕ್ಕಲಿಗ 

4. ದಿನೇಶ್ ಗುಂಡೂರಾವ್ - ಬ್ರಾಹ್ಮಣ

5. ಕೆ ಜೆ ಜಾರ್ಜ್‌ - ಕ್ರೈಸ್ತ 

6. ಶ್ಯಾಮನೂರು ಶಿವಶಂಕರಪ್ಪ - ಲಿಂಗಾಯತ

7. ಶಿವಾನಂದ ಪಾಟೀಲ್ / ಎಂ ಬಿ ಪಾಟೀಲ್ - ಲಿಂಗಾಯತ

8 . ರಾಜಶೇಖರ್ ಪಾಟೀಲ್ / ಈಶ್ವರ್ ಖಂಡ್ರೆ - ಲಿಂಗಾಯತ

9. ಎಸ್ ಆರ್ ಪಾಟೀಲ್ / ಎಚ್ ಕೆ ಪಾಟೀಲ್ - ರೆಡ್ಡಿ ಲಿಂಗಾಯತ

10. ಸತೀಶ್ ಜಾರಕಿಹೊಳಿ - ನಾಯಕ

11. ಶಿವಶಂಕರ ರೆಡ್ಡಿ / ರಾಮಲಿಂಗಾರೆಡ್ಡಿ - ರೆಡ್ಡಿ ಸಮುದಾಯ

 12. ಪ್ರಿಯಾಂಕ ಖರ್ಗೆ - ದಲಿತ ಬಲ

13. ರೂಪ ಶಶಿಧರ್ - ದಲಿತ ಎಡ

14. ಯು ಟಿ ಖಾದರ್ - ಮುಸ್ಮಿಂ

15. ತನ್ವೀರ್ ಸೇಠ್ / ಜಮ್ಮೀರ್ ಅಹಮದ್ - ಮುಸ್ಲಿಂ

16. ಸಿ ಎಸ್ ಶಿವಳ್ಳಿ / ಎಂ ಟಿ ಬಿ ನಾಗರಾಜ್ - ಕುರುಬ

17.  ಶಂಕರ್ - ಕುರುಬ

18. ತುಕರಾಮ್ - ನಾಯಕ / ಆನಂದ್ ಸಿಂಗ್ - ರಜಪುತ್

19. ಎಚ್ ನಾಗೇಶ್ - ದಲಿತ


 

Follow Us:
Download App:
  • android
  • ios