ಕೊಡಗು[ಜ.28]  ‘ಭಾರತ ರತ್ನ ಯಕ್ಕಡಕ್ಕೆ ಸಮ'  ಎಂದು ಕಾಂಗ್ರೆಸ್ ನಾಯಕರೊಬ್ಬರು ಸ್ಟೇಟಸ್ ಹಾಕಿದ್ದಾರೆ.   ಭಾರತ ರತ್ನಕ್ಕೆ ಕಾಂಗ್ರೆಸ್ ನಾಯಕ ಅಪಚಾರ ಮಾಡಿದ್ದಾರೆ.  ಐಎನ್‌ಟಿಯುಸಿ ಜಂಟಿ ಕಾರ್ಯದರ್ಶಿ ಇಂಥ ಸ್ಟೇಟಸ್ ಹಾಕಿದ್ದಾರೆ. ನಾಪಂಡ ಮುದ್ದಪ್ಪ  ಹಾಕಿರುವ ಸ್ಟೇಟಸ್ ಹಲವು ಚರ್ಚೆಗೆ ಕಾರಣವಾಗಿದೆ. 

ಸಿದ್ಧಗಂಗಾ ಶ್ರೀಗಳಿಗೆ ಏಕಿಲ್ಲ ಭಾರತ ರತ್ನ?

ಸಿದ್ಧಗಂಗಾ ಸ್ವಾಮೀಜಿಯವರಿಗೆ ಭಾರತ ರತ್ನ ಸಿಕ್ಕಿಲ್ಲ ಎಂಬ ಕಾರಣವನ್ನೇ ಇಟ್ಟುಕೊಂಡು ಈ ರೀತಿ ಬರೆದಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಕೇಳಲಾಗಿದೆ.  ಒಟ್ಟಿನಲ್ಲಿ ಒಂದು ವಿಷಯವನ್ನು ಜನರ ಮುಂದಿಡುವ ಭರದಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಅತ್ಯುನ್ನತ ಪ್ರಶಸ್ತಿಗೆ ಅವಮಾನ ಮಾಡಿದ್ದಾರೆ.