ಬೆಂಗಳೂರು[ಜು.06]: ರಾಜ್ಯ ರಾಜಕೀಯದಲ್ಲಿ ರಾಜೀನಾಮೆ ಪರ್ವ ಜೋರಾಗಿದೆ. ರಾಮಲಿಂಗಾ ರೆಡ್ಡಿ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್‌ ಪಕ್ಷದ 14 ಶಾಸಕರು ರಾಜೀನಾಮೆ ನೀಡುವ ಮಾತುಗಳು ಕೇಳಿ ಬಂದಿದ್ದವು.. ಈಗಾಗಲೇ 8 ಮಂದಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ರಮೇಶ್ ಜಾರಕಿಹೊಳಿ ಸೇರಿದಂತೆ ಒಟ್ಟು 8 ಮಂದಿ ರೆಬೆಲ್ ಶಾಸಕರು ಸ್ಪೀಕರ್ ಕಚೇರಿಯಲ್ಲಿ ರಾಜೀನಾಮೆ ಸಲ್ಲಿಸಿ ರಾಜ್ಯಪಾಲರ ನಿವಾಸದ ಕಡೆ ಪ್ರಯಾಣ ಬೆಳೆಸಿದ್ದಾರೆ. ಹೀಗಿರುವಾಗ ಸರ್ಕಾರ ಬೀಳುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿವೆ.

ದೋಸ್ತಿ ಪತನ?: ರಾಜೀನಾಮೆ ನೀಡುತ್ತಿರುವವರು 13 ಅಲ್ಲ 14 ಶಾಸಕರು!

ಇತ್ತ ಶಾಸಕರು ರಾಜೀನಾಮೆ ನೀಡಿರುವ ಬೆನ್ನಲ್ಲೇ ಬಿಜೆಪಿ ನಾಯಕರು ಫುಲ್ ಅಲರ್ಟ್ ಆಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಈಗಗಾಗಲೇ ರಾಜಭವನದ ಕಡೆ ಹೆಜ್ಜೆ ಹಾಕಿದ್ದು, ಒಂದು ವೇಳೆ ಸರ್ಕಾರ ಬಿದ್ದರೆ ಬಿಜೆಪಿಗೆ ಸರ್ಕಾರ ರಚಿಸುವ ಅವಕಾಶ ನೀಡಬೇಕೆಂದು ಹಕ್ಕು ಮಂಡಿಸಿದ್ದಾರೆ.

ರಾಜೀನಾಮೆ ನೀಡ್ತೇವೆಂದು ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ, ಅವರನ್ನು ನಂಬಬೇಡಿ: ಸ್ಪೀಕರ್ ಗರಂ!

ಒಟ್ಟಾರೆಯಾಗಿ ರಾಜಕೀಯ ವಲಯದಲ್ಲಾಗುತ್ತಿರುವ ಬೆಳವಣಿಗೆಗಳಿಂದ ವಿದೇಶೀ ಪ್ರವಾಸದಲ್ಲಿರುವ ಸಿಎಂ ಕುಮಾರಸ್ವಾಮಿ ರಾಜ್ಯಕ್ಕೆ ಮರಳುವ ಮೊದಲೇ ಸರ್ಕಾರ ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ.

13 ಶಾಸಕರ ರಾಜೀನಾಮೆ? ಹೀಗಾಗಲಿದೆ ಸರ್ಕಾರದ ನಂಬರ್ ಗೇಮ್

ವೈಎಸ್‌ವಿ ದತ್ತಾ ಪ್ರತಿಕ್ರಿಯೆ:

"