ಆರ್. ಅಶೋಕ್, ಈಶ್ವರಪ್ಪ ಬಳಿಕ ಇದೀಗ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಭವಿಷ್ಯ ನುಡಿದಿದ್ದಾರೆ.

ಹುಬ್ಬಳ್ಳಿ, [ಅ.14]: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಗ್ಗೆ ಬಿಜೆಪಿ ನಾಯಕರು ಭವಿಷ್ಯವಾಣಿಗಳನ್ನು ನುಡಿಯುತ್ತಿದ್ದಾರೆ. ಆರ್. ಅಶೋಕ್, ಈಶ್ವರಪ್ಪ ಬಳಿಕ ಇದೀಗ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಭವಿಷ್ಯ ನುಡಿದಿದ್ದಾರೆ.

ಹುಬ್ಬಳ್ಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿಕೂಟದ ಸಮ್ಮಿಶ್ರ ಸರ್ಕಾರ ಅಸ್ಥಿರವಾಗಿದ್ದು, ಯಾವಾಗ ಬೇಕಾದರೂ ಬೀಳಬಹುದು. ಕುಮಾರಸ್ವಾಮಿ ಪ್ರಮಾಣ ವಚನದ ವೇಳೆ ಕೈಹಿಡಿದು ನಿಂತವರೆಲ್ಲ ಈಗ ದೂರವಾಗಿದ್ದಾರೆ. ಕಾಂಗ್ರೆಸ್‌ ಪಕ್ಷ ಮತ್ತು ರಾಹುಲ್‌ ಗಾಂಧಿಯವರ ಮೇಲೆ ರಾಷ್ಟ್ರದಲ್ಲಿ ಯಾರಿಗೂ ವಿಶ್ವಾಸವಿಲ್ಲ. 

2 ತಿಂಗಳಲ್ಲಿಯೇ ಬಿಜೆಪಿ ಅಧಿಕಾರಕ್ಕೆ: ಕುತೂಹಲ ಮೂಡಿಸಿದ ಭವಿಷ್ಯವಾಣಿ

ಯಾವುದೇ ಕಾರಣಕ್ಕೂ ಅ.12ರಂದು ಸಚಿವ ಸಂಪುಟ ವಿಸ್ತರಣೆ ಆಗುವುದಿಲ್ಲ ಎಂದು ಈ ಮೊದಲೇ ಹೇಳಿದ್ದೆ. ರಾಜಕೀಯ ಅನುಭವದ ಮೇಲೆ ನಾನು ನುಡಿದಿದ್ದ ಭವಿಷ್ಯ ನಿಜವಾಗಿದೆ. ಸಚಿವ ಸಂಪುಟ ವಿಸ್ತರಣೆಯಾದ ದಿನವೇ ಸರ್ಕಾರ ಪತನವಾಗಲಿದೆ ಕಾದು ನೋಡಿ ಎಂದು ಮತ್ತೊಂದು ಭವಿಷ್ಯ ನುಡಿದರು.

ಎನ್‌. ಮಹೇಶ್‌ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಮಹಾಘಟಬಂಧನದ ಭವಿಷ್ಯದ ದಿಕ್ಸೂಚಿ ಶೆಟ್ಟರ್‌ ಹೇಳಿದ್ದಾರೆ.