ಬೆಂಗ​ಳೂರು :  ಸಚಿವ ಸಂಪುಟ ವಿಸ್ತರಣೆಯ ಕಾಂಗ್ರೆಸ್‌ ಪಾಲಿನ ಕಸರತ್ತು ಕೊನೆಗೂ ಪೂರ್ಣಗೊಂಡು ಎಚ್‌.ಡಿ.ಕುಮಾರಸ್ವಾಮಿ ಅವರ ಸಚಿವ ಸಂಪುಟಕ್ಕೆ 8 ಮಂದಿ ಹೊಸ ಸಚಿವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿ ಸೇರ್ಪಡೆಯಾದ ಬೆನ್ನಲ್ಲೇ ಖಾತೆಗಾಗಿ ಕ್ಯಾತೆ ಆರಂಭಗೊಂಡಿದೆ.

ಎರಡು ಅಥವಾ ಎರ​ಡಕ್ಕೂ ಹೆಚ್ಚು ಪ್ರಮುಖ ಖಾತೆ​ಗ​ಳನ್ನು ಹೊಂದಿ​ರುವ ಕಾಂಗ್ರೆಸ್‌ನ ಪ್ರಭಾ​ವಿ​ ಸಚಿ​ವರು ತಮ್ಮ ಖಾತೆ​ಗ​ಳನ್ನು ಬಿಟ್ಟು​ಕೊ​ಡಲು ಹಿಂದೇಟು ಹಾಕು​ತ್ತಿ​ರು​ವುದು ಮತ್ತು ಹೊಸ ಸಚಿ​ವರು ಪ್ರಮುಖ ಖಾತೆ​ಗ​ಳಿಗೆ ಬೇಡಿ​ಕೆ​ಯಿ​ಟ್ಟಿ​ರುವ ಕಾರಣ ಖಾತೆ ಹಂಚಿಕೆಯ ಕಗ್ಗಂಟು ನಿರ್ಮಾ​ಣ​ವಾ​ಗಿ​ದೆ.

ಈ ಕಗ್ಗಂಟು ನಿವಾ​ರಿ​ಸಲು ರಾಜ್ಯ ಉಸ್ತು​ವಾರಿ ಕೆ.ಸಿ. ವೇಣು​ಗೋ​ಪಾಲ್‌ ಮಧ್ಯ​ಸ್ಥಿ​ಕೆ​ಯನ್ನು ರಾಜ್ಯ ನಾಯ​ಕತ್ವ ಕೋರಿದ್ದು, ಸೋಮ​ವಾ​ರದ ವೇಳೆಗೆ ವೇಣು​ಗೋ​ಪಾಲ್‌ ಅವ​ರೊಂದಿಗೆ ಸಮಾ​ಲೋ​ಚನೆ ನಡೆ​ಸಿದ ನಂತ​ರವೇ ಇದು ಇತ್ಯ​ರ್ಥ​ವಾ​ಗ​ಲಿದೆ ಎನ್ನ​ಲಾ​ಗು​ತ್ತಿ​ದೆ.

ಕಾಂಗ್ರೆಸ್‌ ಹೈಕ​ಮಾಂಡ್‌ನೊಂದಿ​ಗಿನ ಸಮಾ​ಲೋ​ಚನೆ ವೇಳೆ ಯಾರಾರ‍ಯರು ಒಂದ​ಕ್ಕಿಂತ ಹೆಚ್ಚು ಖಾತೆ​ಗ​ಳನ್ನು ಹೊಂದಿ​ದ್ದಾರೋ ಅವ​ರೆಲ್ಲ ತಮ್ಮ ಹೆಚ್ಚು​ವರಿ ಖಾತೆ​ಗ​ಳನ್ನು ಬಿಟ್ಟು​ಕೊ​ಡ​ಬೇಕು. ಅದನ್ನು ಹೊಸ ಸಚಿ​ವ​ರಿಗೆ ಹಂಚು​ವುದು ಎಂದು ತೀರ್ಮಾ​ನ​ವಾ​ಗಿತ್ತು ಎನ್ನ​ಲಾ​ಗು​ತ್ತಿದೆ. ಆದರೆ, ಕಾಂಗ್ರೆ​ಸ್‌ನ ಸಚಿ​ವರ ಬಳಿ ಇರುವ ಹೆಚ್ಚು​ವರಿ ಖಾತೆ​ಗಳ ಸಂಖ್ಯೆ 12 ಇದೆ. ಇದನ್ನು 8 ಸಚಿ​ವ​ರಿಗೆ ಹಂಚ​ಬೇ​ಕಿದೆ. ಹೀಗಾಗಿ ತಮ್ಮ ಹೆಚ್ಚು​ವರಿ ಖಾತೆ​ಗ​ಳನ್ನು ಉಳಿ​ಸಿ​ಕೊ​ಳ್ಳಲು ಪರ​ಮೇ​ಶ್ವರ್‌, ಶಿವ​ಕು​ಮಾರ್‌, ದೇಶ​ಪಾಂಡೆ, ಕೃಷ್ಣ​ಬೈ​ರೇ​ಗೌಡ ಮೊದ​ಲಾ​ದ​ವರು ಪ್ರಯತ್ನ ನಡೆ​ಸಿ​ದ್ದಾರೆ.

ಆದರೆ, ಹೊಸ ಸಚಿ​ವ​ರಿಗೆ ಈ ಪ್ರಮುಖ ಸಚಿ​ವರ ಬಳಿ ಇರುವ ಹೆಚ್ಚು​ವರಿ ಖಾತೆ​ಗಳ ಮೇಲೆ ಕಣ್ಣಿದೆ. ಉದಾ​ಹ​ರ​ಣೆಗೆ ಡಾ.ಜಿ. ಪರ​ಮೇ​ಶ್ವರ್‌ ಬಳಿ ಗೃಹ, ಬೆಂಗ​ಳೂರು ಅಭಿ​ವೃದ್ಧಿ ಹಾಗೂ ಯೋಜನಾ ಸಬ​ಲೀ​ಕ​ರಣ ಮತ್ತು ಕ್ರೀಡಾ ಇಲಾಖೆ ಎಂಬ ಮೂರು ಖಾತೆ​ಗ​ಳಿವೆ. ಈ ಪೈಕಿ ಪರ​ಮೇ​ಶ್ವರ್‌ ಅವರು ಯೋಜನಾ ಸಬ​ಲೀ​ಕ​ರಣ ಹಾಗೂ ಕ್ರೀಡಾ ಇಲಾ​ಖೆ​ಯನ್ನು ಬಿಟ್ಟು​ಕೊ​ಡಲು ಸಿದ್ಧರಿ​ದ್ದಾರೆ. ಆದರೆ, ಗೃಹ ಹಾಗೂ ಬೆಂಗ​ಳೂರು ಅಭಿ​ವೃದ್ಧಿ ತಮಗೆ ಇರ​ಬೇಕು ಎಂದು ಪಟ್ಟು ಹಿಡಿ​ದಿ​ದ್ದಾ​ರೆ.

ಆದರೆ, ಪರ​ಮೇ​ಶ್ವರ್‌ ಬಳಿ ಇರುವ ಗೃಹ ಅಥವಾ ಬೆಂಗ​ಳೂರು ಅಭಿ​ವೃದ್ಧಿ ಈ ಎರ​ಡರ ಪೈಕಿ ಒಂದನ್ನು ತಮಗೆ ಬಿಟ್ಟು​ಕೊ​ಡ​ಬೇಕು ಎಂಬುದು ಹೊಸ ಸಚಿ​ವರ ಆಗ್ರಹ. ಅದೇ ರೀತಿ ಡಿ.ಕೆ.ಶಿವ​ಕು​ಮಾರ್‌ ಅವರ ಬಳಿ ಜಲ​ಸಂಪ​ನ್ಮೂ​ಲ ಹಾಗೂ ವೈದ್ಯ​ಕೀಯ ಶಿಕ್ಷಣ ಖಾತೆ​ಗ​ಳಿವೆ. ಈ ಎರ​ಡ​ರಲ್ಲಿ ಒಂದು ಬಿಟ್ಟು​ಕೊ​ಡಲಿ ಎಂಬ ಆಗ್ರ​ಹ​ವಿ​ದ್ದರೆ, ಡಿ.ಕೆ. ಶಿವ​ಕು​ಮಾರ್‌ ಈ ಖಾತೆ​ಗ​ಳನ್ನು ಬಿಟ್ಟು​ಕೊ​ಡಲು ಸುತರಾಂ ಒಪ್ಪು​ತ್ತಿಲ್ಲ. ಇದೇ ರೀತಿ ದೇಶ​ಪಾಂಡೆ ಹಾಗೂ ಕೃಷ್ಣಬೈರೇ​ಗೌಡ ಮೊದ​ಲಾ​ದ​ವರು ಪಟ್ಟು ಹಿಡಿ​ದಿ​ದ್ದಾರೆ ಎನ್ನ​ಲಾ​ಗಿದೆ.

ಈ ಸಚಿ​ವರ ವಾದ- ಕಾಂಗ್ರೆಸ್‌ ಬಳಿ 12 ಹೆಚ್ಚು​ವರಿ ಖಾತೆ​ಗ​ಳಿವೆ. ಕಿರಿಯ ಸಚಿ​ವರ ಬಳಿ ಹೆಚ್ಚುವ​ರಿ​ಯಾ​ಗಿ​ರುವ ಒಂದೊಂದು ಖಾತೆ​ಗ​ಳನ್ನು ಪಡೆ​ದರೂ ಎಲ್ಲಾ ಎಂಟು ಸಚಿ​ವ​ರಿಗೆ ಖಾತೆ​ಗ​ಳನ್ನು ನೀಡ​ಬ​ಹುದು. ಪಕ್ಷಕ್ಕೆ ನೀಡಿದ ಕೊಡುಗೆ ಹಾಗೂ ಹಿರಿ​ತ​ನ​ವನ್ನು ಮನ್ನಿಸಿ ತಮಗೆ ಎರಡು ಖಾತೆ​ಗ​ಳನ್ನು ಉಳಿ​ಸ​ಬೇಕು ಎಂಬುದು.

ಹೀಗಾಗಿ ಖಾತೆ ಕಗ್ಗಂಟು ಬಗೆ​ಹ​ರಿ​ಸಲು ರಾಜ್ಯ ನಾಯ​ಕತ್ವ ವಿಫ​ಲ​ವಾ​ಗಿದೆ. ಈ ಹಿನ್ನೆ​ಲೆ​ಯಲ್ಲಿ ರಾಜ್ಯ ಉಸ್ತು​ವಾರಿ ಕೆ.ಸಿ. ವೇಣು​ಗೋ​ಪಾಲ್‌ ಅವರ ಮಧ್ಯ​ಸ್ಥಿಕೆ ಅನಿ​ವಾ​ರ್ಯ​ವಾ​ಗಿದ್ದು, ಸೋಮ​ವಾರದ ವೇಳೆಗೆ ಈ ಪ್ರಕ್ರಿಯೆ ನಡೆ​ಯ​ಬೇಕಿದೆ. ಇದಾದ ನಂತ​ರವೇ ನೂತನ ಸಚಿ​ವ​ರಿಗೆ ಖಾತೆ ಹಂಚಿ​ಕೆ​ಯಾ​ಗ​ಲಿದೆ ಎಂದು ಮೂಲ​ಗಳು ತಿಳಿ​ಸಿ​ವೆ.

9 ಸಂಸ​ದೀಯ ಕಾರ‍್ಯ​ದ​ರ್ಶಿಗಳು

ಎ.ಅಬ್ದುಲ್‌ ಜಬ್ಬಾರ್‌ (ವಿ​ಧಾ​ನ​ಪ​ರಿ​ಷತ್‌ ಸದ​ಸ್ಯ), ಅಂಜ​ಲಿ ನಿಂಬಾ​ಳ್ಕರ್‌ (ಖಾ​ನಾ​ಪುರ ಶಾಸ​ಕಿ), ಐವಾನ್‌ ಡಿಸೋಜಾ (ವಿ​ಧಾ​ನ​ಪ​ರಿ​ಷತ್‌ ಸದ​ಸ್ಯ), ಮಹಾಂತೇಶ್‌.ಎಸ್‌.ಕೌಜ​ಲಗಿ (ಬೈ​ಲ​ಹೊಂಗಲ ಶಾಸ​ಕ​), ರೂಪಾ ಶಶಿ​ಧರ್‌ (ಕೆ​ಜಿ​ಎಫ್‌ ಶಾಸ​ಕಿ), ಕೆ. ಗೋವಿಂದ​ರಾಜು (ವಿ​ಧಾ​ನ​ಪ​ರಿ​ಷತ್‌ ಸದ​ಸ್ಯ​), ರಾಘ​ವೇಂದ್ರ ಹಿಟ್ನಾಳ್‌ (ಕೊ​ಪ್ಪ​ಳ), ಎಂ.ಎ. ಗೋಪಾ​ಲ​ಸ್ವಾಮಿ (ವಿ​ಧಾ​ನ​ಪ​ರಿಷತ್‌ ಸದ​ಸ್ಯ) ಮತ್ತು ದುರ್ಗಪ್ಪ ಹಲ​ಗೇರಿ (ಲಿಂಗ​ಸು​ಗೂರು ಶಾಸ​ಕ)

- ಶರ​ಣ​ಬ​ಸಪ್ಪ ದರ್ಶ​ನಾ​ಪು​ರ (ಶ​ಹಾ​ಪುರ ಶಾಸ​ಕ​​): ಯೋಜನಾ ಆಯೋ​ಗದ ಉಪಾ​ಧ್ಯಕ್ಷ

- ಅಜ​ಯ್‌ ​ಸಿಂಗ್‌ (ಜೇ​ವರ್ಗಿ ಶಾಸ​ಕ​​): ದೆಹಲಿ ವಿಶೇಷ ಪ್ರತಿ​ನಿಧಿ

- ವಿ.ಮುನಿ​ಯಪ್ಪ (ಶಿ​ಡ್ಲ​ಘ​ಟ್ಟ​ ಶಾಸಕ): ಮುಖ್ಯಮಂತ್ರಿಗಳ ರಾಜ​ಕೀಯ ಕಾರ್ಯ​ದರ್ಶಿ

1. ಸಿ.ಎಸ್‌.ಶಿವಳ್ಳಿ (ಕುಂದಗೋಳ ಶಾಸಕ)

2. ತುಕಾರಾಂ (ಸಂಡೂರು ಶಾಸಕ)

3. ಸತೀಶ್‌ ಜಾರ​ಕಿ​ಹೊಳಿ (ಯಮಕನಮರಡಿ ಶಾಸಕ)

4. ಎಂ.ಬಿ.ಪಾಟೀಲ್‌ (ಬಬಲೇಶ್ವರ ಶಾಸಕ)

5. ಪಿ.ಟಿ.ಪರ​ಮೇ​ಶ್ವರ್‌ ನಾಯ್ಕ್ (ಹೂವಿನ ಹಡಗಲಿ ಶಾಸಕ)

6. ರಹೀಂ ಖಾನ್‌ (ಬೀದರ್‌ ಉತ್ತರ ಶಾಸಕ)

7. ಆರ್‌.ಬಿ.ತಿಮ್ಮಾಪುರ (ಮುಧೋಳ ಶಾಸಕ)

8. ಎಂ.ಟಿ.ಬಿ.ನಾಗ​ರಾಜ್‌ (ಹೊಸಕೋಟೆ ಶಾಸಕ)


ನಿಗಮ-ಮಂಡಳಿ ಅಧ್ಯಕ್ಷರ ಅಂತಿಮ ಪಟ್ಟಿ

ಡಾ. ಕೆ.ಸುಧಾ​ಕರ್‌ (ಚಿ​ಕ್ಕ​ಬ​ಳ್ಳಾ​ಪು​ರ​): ಪರಿ​ಸರ ಮಾಲಿನ್ಯ ನಿಯಂತ್ರಣ ಮಂಡಳಿ

ಎಸ್‌.ಟಿ.ಸೋಮ​ಶೇ​ಖರ್‌ (ಯಶವಂತಪುರ): ಬೆಂಗ​ಳೂರು ಅಭಿ​ವೃದ್ಧಿ ಪ್ರಾಧಿ​ಕಾರ

ಎನ್‌.ಎ.ಹ್ಯಾರಿಸ್‌ (ಶಾಂತಿನಗರ): ಬೆಂಗ​ಳೂರು ಮಹಾ​ನ​ಗರ ಸಾರಿಗೆ ಸಂಸ್ಧೆ

ಬೈರತಿ ಸುರೇಶ್‌ (ಹೆ​ಬ್ಬಾ​ಳ​): ಕರ್ನಾ​ಟಕ ರಾಜ್ಯ ಸಣ್ಣ ಕೈಗಾ​ರಿ​ಕಾ​ಗಳ ಅಭಿ​ವೃದ್ಧಿ ನಿಗ​ಮ

ಬೈರತಿ ಬಸ​ವ​ರಾಜು (ಕೆ.ಆರ್‌.ಪುರ): ಕರ್ನಾ​ಟಕ ಸಾಬೂನು ಮತ್ತು ಮಾರ್ಜಕ ನಿಗಮ

ಮುನಿ​ರ​ತ್ನ (ರಾ​ಜ​ರಾ​ಜೇ​ಶ್ವರಿನಗ​ರ​): ಕರ್ನಾ​ಟಕ ಕೌಶಲ್ಯ ಅಭಿ​ವೃದ್ಧಿ ನಿಗಮ

ಬಿ.ಕೆ. ಸಂಗ​ಮೇ​ಶ್ವರ್‌ (ಭ​ದ್ರಾ​ವತಿ​): ಕರ್ನಾ​ಟಕ ಭೂ ಸೇನಾ ನಿಗಮ

ಆರ್‌. ನರೇಂದ್ರ (ಹನೂರು): ಕರ್ನಾ​ಟಕ ಆಹಾರ ಮತ್ತು ನಾಗ​ರಿಕ ಪೂರೈಕೆ ನಿಗಮ (ಕೆ​ಎ​ಸ್‌​ಎ​ಫ್‌​ಸಿ​)

ನಾರಾ​ಯಣ್‌ ರಾವ್‌ (ಬ​ಸ​ವಕಲ್ಯಾಣ​): ಕರ್ನಾ​ಟಕ ಅರಣ್ಯ ಅಭಿ​ವೃದ್ಧಿ ನಿಗ​ಮ

ಟಿ.ವೆಂಕ​ಟ​ರಮ​ಣಯ್ಯ (ದೊಡ್ಡ​ಬ​ಳ್ಳಾ​ಪುರ): ಕರ್ನಾ​ಟಕ ರಸ್ತೆ ಅಭಿ​ವೃದ್ಧಿ ನಿಗಮ

ಡಾ. ಉಮೇಶ್‌ ಜಾಧವ್‌ (ಚಿಂಚೋಳಿ): ಕರ್ನಾ​ಟಕ ರಾಜ್ಯ ಉಗ್ರಾಣ ನಿಗ​ಮ

ಟಿ.ರಘು​ಮೂರ್ತಿ (ಚಳ್ಳ​ಕೆರೆ​): ಹಟ್ಟಿಚಿನ್ನದ ಗಣಿ ನಿಯ​ಮಿ​ತ

ಬಿ.ಶಿವ​ಣ್ಣ (ಆ​ನೇ​ಕ​ಲ್‌​): ಕಿಯೋ​ನಿ​ಕ್ಸ್‌

ಎಸ್‌.​ಎ​ನ್‌.ನಾರಾ​ಯಣ ಸ್ವಾಮಿ (ಬಂಗಾ​ರ​ಪೇಟೆ): ಡಾ

ಬಿ.ಆರ್‌.ಅಂಬೇ​ಡ್ಕರ್‌ ಅಭಿ​ವೃದ್ಧಿ ನಿಗಮ

ಲಕ್ಷ್ಮೇ ಹೆಬ್ಬಾ​ಳ​ಕ​ರ್‌ (ಬೆ​ಳ​ಗಾವಿ ಗ್ರಾಮೀ​ಣ​)- ಮೈಸೂರು ಮಿನ​ರಲ್ಸ್‌ ಲಿಮಿ​ಟೆ​ಡ್‌

ಶಿವರಾಮ್‌ ಹೆಬ್ಬಾರ್‌ (ಯ​ಲ್ಲಾ​ಪುರ): ಎನ್‌​ಡಬ್ಲ್ಯುಕೆ​ಆ​ರ್‌​ಟಿ​ಸಿ

ಕೆ.ಎನ್‌.ಸುಬ್ಬಾ​ರೆಡ್ಡಿ (ಬಾಗೇಪಲ್ಲಿ): ಕರ್ನಾ​ಟಕ ರೇಷ್ಮೆ ಕೈಗಾ​ರಿಕೆ ನಿಗಮ

ಯಶ​ವಂತ​ಗೌಡ ಪಾಟೀ​ಲ್‌ (ಇಂಡಿ​): ಕರ್ನಾ​ಟಕ ನಗರ ನೀರು ಪೂರೈಕೆ ಹಾಗೂ ಒಳ​ಚ​ರಂಡಿ ಮಂಡಳಿ

ಟಿ.ಡಿ.ರಾಜೇ​ಗೌಡ (ಶೃಂಗೇ​ರಿ): ಮಲೆ​ನಾಡು ಪ್ರದೇಶ ಅಭಿ​ವೃದ್ಧಿ ಪ್ರಾಧಿ​ಕಾ​ರ