ಇನ್ನು ಕೆಲ ದಿನಗಳಲ್ಲೇ ಮತ್ತೆ ಸಚಿವ ಸಂಪುಟ ವಿಸ್ತರಣೆ

Karnataka cabinet tussle: Congress MLAs revolt against party
Highlights

ಬಂಡಾಯ ಶಮನಕ್ಕಾಗಿ ಪರಮೇಶ್ವರ್, ದಿನೇಶ್ ಗುಂಡೂರಾವ್ ಹಾಗೂ ಎಂ.ಬಿ.ಪಾಟೀಲ್‌ಗೆ ಕಾಂಗ್ರೆಸ್ ಹೈಕಮಾಂಡ್ ದಿಲ್ಲಿಗೆ ಬುಲಾವ್ ನೀಡಿದೆ. ಅತೃಪ್ತಿ ಶಮನಕ್ಕಾಗಿ ಜೂ.15 ರಿಂದ 20ರೊಳಗೆ  2ನೇ ಹಂತದ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ

ಬೆಂಗಳೂರು : ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ವಂಚಿತರ ಅತೃಪ್ತಿ ತಾರಕ ಮುಟ್ಟಿದ್ದು, ಅತೃಪ್ತರ ತಲೆಯಾಳು ಎಂ.ಬಿ. ಪಾಟೀಲ್ ನಿವಾಸ ಹೈಡ್ರಾಮಾದ ಕೇಂದ್ರ ಸ್ಥಳವಾಗಿತ್ತು. 

ಕಾಂಗ್ರೆಸ್ ಶಾಸಕರ ಈ ಅತೃಪ್ತಿ ವಿಕೋಪ ಮುಟ್ಟಿ, ಮೈತ್ರಿಕೂಟದ ಅಸ್ತಿತ್ವಕ್ಕೆ ಕಂಟಕ ತರುವ ಲಕ್ಷಣ ಕಂಡ ಹಿನ್ನೆಲೆಯಲ್ಲಿ ಸ್ವತಃ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅಖಾಡಕ್ಕಿಳಿದು ಸಮಾಧಾನಪಡಿಸಲು ನಡೆಸಿದ ಪ್ರಯತ್ನಗಳು ವಿಫಲವಾದವು. 

ಎಂ.ಬಿ. ಪಾಟೀಲ್ ಬಣ ಹಾಗೂ ಎಚ್.ಕೆ. ಪಾಟೀಲ್ ಬಣ ನಗರದಲ್ಲಿ ತಮ್ಮ ಬಂಡಾಯ ಜ್ವಾಲೆ ತೀವ್ರಗೊಳಿಸಿದ್ದರು. ಒಂದು ಹಂತದಲ್ಲಿ ಎಂ.ಬಿ. ಪಾಟೀಲ್ ಅತೃಪ್ತ ಶಾಸಕರನ್ನು ಒಗ್ಗೂಡಿಸುತ್ತಿದ್ದರಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಆತಂಕಕ್ಕೆ ಒಳಗಾದರು. 

20ರೊಳಗೆ ಮತ್ತೆ ಸಂಪುಟ ವಿಸ್ತರಣೆ

ಬೆಂಗಳೂರು: ಬಂಡಾಯ ಶಮನಕ್ಕಾಗಿ ಪರಮೇಶ್ವರ್, ದಿನೇಶ್ ಗುಂಡೂರಾವ್ ಹಾಗೂ ಎಂ.ಬಿ.ಪಾಟೀಲ್‌ಗೆ ಕಾಂಗ್ರೆಸ್ ಹೈಕಮಾಂಡ್ ದಿಲ್ಲಿಗೆ ಬುಲಾವ್ ನೀಡಿದೆ. ಅತೃಪ್ತಿ ಶಮನಕ್ಕಾಗಿ ಜೂ.15 ರಿಂದ 20ರೊಳಗೆ  2ನೇ ಹಂತದ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

loader