ಮೈತ್ರಿಕೂಟ ಸರ್ಕಾರ ರಚನೆಯಾಗಿ 2 ವಾರ ಕಳೆದರೂ ಕಗ್ಗಾಂಟಾಗಿ ಉಳಿದಿರುವ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದೆ. ಬಹಳಷ್ಟು ಕಸರತ್ತುಗಳ ಬಳಿಕ ಮಿತ್ರಪಕ್ಷಗಳು ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿವೆ. ಜೆಡಿಎಸ್‌ನ ಫೈನಲ್ ಲಿಸ್ಟ್‌ನಲ್ಲಿ ಯಾರ್ಯಾರಿದ್ದಾರೆ ಎಂದು ನೋಡೋಣ...
ಬೆಂಗಳೂರು: ರಾಜ್ಯದ ನೂತನ ಸಚಿವ ಸಂಪುಟ ಪ್ರಮಾಣವಚನಕ್ಕೆ ಬುಧವಾರ ಮಧ್ಯಾಹ್ನ 2.12ಕ್ಕೆ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ಸಚಿವರ ಪಟ್ಟಿಯನ್ನು ಸಿದ್ಧಪಡಿಸಿವೆ.
suvarnanews.comಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಜೆಡಿಎಸ್ ವರಿಷ್ಠರು ಒಂದು ಅಥವಾ ಎರಡು ಸ್ಥಾನ ಖಾಲಿ ಉಳಿಸಿಕೊಳ್ಳಲು ನಿರ್ಧರಿಸಿದ್ದು, 10 ಮಂದಿಯ ಹೆಸರನ್ನು ಸಚಿವ ಸ್ಥಾನಕ್ಕೆ ಅಂತಿಮಗೊಳಿಸಿವೆ.
ನಿನ್ನೆ ದೇವೇಗೌಡರ ನಿವಾಸದಲ್ಲಿ ನಡೆದ ಶಾಸಕಾಂಗ ಪಕ್ಷದಲ್ಲಿ ಸಭೆಯಲ್ಲಿ, ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ವರಿಷ್ಟರ ತೀರ್ಮಾನಕ್ಕೆ ಬದ್ದ ಎಂಬ ನಿರ್ಧಾರಕ್ಕೆ ಶಾಸಕರು ಬಂದಿದ್ದಾರೆ.
ಜೆಡಿಎಸ್ ಸಚಿವರ ಫೈನಲ್ ಲಿಸ್ಟ್ ಹೀಗಿದೆ...
- ಜಿ.ಟಿ. ದೇವೇಗೌಡ
- ಪುಟ್ಟರಾಜು
- ಡಿ.ಸಿ. ತಮ್ಮಣ್ಣ
- ಶ್ರೀನಿವಾಸ್ (ವಾಸು)
- ಹೆಚ್.ಕೆ. ಕುಮಾರಸ್ವಾಮಿ
- ವೆಂಕಟರಾವ್ ನಾಡಗೌಡ
- ಮನಗೂಳಿ
- ಎನ್. ಮಹೇಶ್
- ಹೆಚ್.ಡಿ. ರೇವಣ್ಣ
- ಬಂಡೆಪ್ಪ ಕಾಶಂಪೂರ್
