ಕರ್ನಾಟಕ ಬಜೆಟ್ 2018; ಸಿದ್ದು ಸೂಟ್’ಕೇಸ್’ ನಲ್ಲಿ ಬಂಪರ್ ಗಿಫ್ಟ್’ಗಳು?

First Published 16, Feb 2018, 9:34 AM IST
Karnataka Budget 208
Highlights

ಇಂದು ಸಿಎಂ ಸಿದ್ದರಾಮಯ್ಯ ಸರ್ಕಾರ ತಮ್ಮ ಅವಧಿಯ ಅಂತಿಮ ಬಜೆಟ್ ಮಂಡಿಸಲಿದೆ. ಸಿದ್ದು ಸೂಟ್​ಕೇಸ್​ನಲ್ಲಿ ಚುನಾವಣಾ ದೃಷ್ಟಿಯಿಂದ ಬಂಪರ್ ಗಿಫ್ಟ್​ಗಳು ಸಿಗಲಿವೆ ಎನ್ನಲಾಗುತ್ತಿದೆ.  ಇದೊಂದು ಎಲೆಕ್ಷನ್ ಬಜೆಟ್ ಅಂತಾನೇ ಬಣ್ಣಿಸಲಾಗುತ್ತಿದೆ. ಹಾಗಿದ್ರೆ ಸಿದ್ದರಾಮಯ್ಯ ಬಜೆಟ್ ಹೇಗಿರುತ್ತೆ. ಯಾರಿಗೆ ಏನೆಲ್ಲಾ ಸಿಗಬಹುದು. 

ಬೆಂಗಳೂರು (ಫೆ.16):  ಇಂದು ಸಿಎಂ ಸಿದ್ದರಾಮಯ್ಯ ಸರ್ಕಾರ ತಮ್ಮ ಅವಧಿಯ ಅಂತಿಮ ಬಜೆಟ್ ಮಂಡಿಸಲಿದೆ. ಸಿದ್ದು ಸೂಟ್​ಕೇಸ್​ನಲ್ಲಿ ಚುನಾವಣಾ ದೃಷ್ಟಿಯಿಂದ ಬಂಪರ್ ಗಿಫ್ಟ್​ಗಳು ಸಿಗಲಿವೆ ಎನ್ನಲಾಗುತ್ತಿದೆ.  ಇದೊಂದು ಎಲೆಕ್ಷನ್ ಬಜೆಟ್ ಅಂತಾನೇ ಬಣ್ಣಿಸಲಾಗುತ್ತಿದೆ. ಹಾಗಿದ್ರೆ ಸಿದ್ದರಾಮಯ್ಯ ಬಜೆಟ್ ಹೇಗಿರುತ್ತೆ. ಯಾರಿಗೆ ಏನೆಲ್ಲಾ ಸಿಗಬಹುದು. 

ಚುನಾವಣಾ ವರ್ಷವಾಗಿರೋದ್ರಿಂದ ಈ ಬಾರಿ ಸಿದ್ಧರಾಮಯ್ಯ ಬಜೆಟ್ ಸಹಜವಾಗಿಯೇ ಜನಪ್ರಿಯ ಘೋಷಣೆಗಳ ಪುಸ್ತಕ ಅನ್ನೋದ್ರಲ್ಲಿ ಅನುಮಾನವಿಲ್ಲ. ರೈತರು ಮತ್ತು ಮತದಾರ ವರ್ಗವನ್ನೇ ಗುರಿಯಾಗಿಸಿಕೊಂಡು ಸಿದ್ದರಾಮಯ್ಯ ಭರವಸೆಗಳ ಮಹಾಪೂರವನ್ನೇ ಹರಿಸಲಿದ್ದಾರೆ. ಸಿದ್ದರಾಮಯ್ಯ ಈ ಬಾರಿ ಬಜೆಟ್ ಹಲವು ವಿಶೇಷತೆಗಳನ್ನ ಹೊಂದಿವೆ. 

ರೈತರಿಗೆ ಏನು..?

ರೈತರ ಅಲ್ಪಾವಧಿ ಸಾಲ ಮನ್ನಾ ಮಾಡೋ ಸಾಧ್ಯತೆ.

3100 ಕೋಟಿ ರೂ ಬಾಕಿ ಸಾಲದ ಮೊತ್ತ ಮನ್ನಾ. 

ವಾಣಿಜ್ಯ ಬ್ಯಾಂಕ್’ಗಳಲ್ಲಿನ ರೈತರ ಸಾಲದ ಬಡ್ಡಿ ಮನ್ನಾ
ಮೋದಿ ಸರ್ಕಾರಕ್ಕೆ ಟಾಂಗ್ ಕೊಡು ಸಿದ್ಧರಾದ ಸಿದ್ಧರಾಮಯ್ಯ  ಅಸಲು ಮನ್ನಾ ಮಾಡಲು ಮುಂದಾಗುವಂತೆ ಮೋದಿಗೆ ಟಾಂಗ್. ಹೊಸ ತೆರಿಗೆ ಇಲ್ಲದೇ ಜನಪ್ರಿಯ ಘೋಷಣೆ ಮಾಡೋ ಸರ್ಕಸ್.

ಸರ್ಕಾರಿ ನೌಕರರಿಗೆ ಬಂಪರ್!
ಸರ್ಕಾರಿ ನೌಕರರಿಗೆ ಶೇಕಡಾ 30 ರಷ್ಟು ವೇತನ ಹೆಚ್ಚಳದ ಭರವಸೆ.
10500 ಕೋಟಿ ರೂ ಆರ್ಥಿಕ ಹೊರೆ ಹೊರಲು ರೆಡಿಯಾದ ಸಿದ್ಧರಾಮಯ್ಯ.

‘ಭಾಗ್ಯ’ ಸರಣಿಗೆ ಟಾನಿಕ್..?
ರಾಜ್ಯದ ಎಲ್ಲಾ  ಬಿಪಿಎಲ್ ಕುಟುಂಬಗಳಿಗೆ ಕಂಬಳಿ ಭಾಗ್ಯ 
ಈ ವರ್ಷದಿಂದಲೇ ಜಾರಿಯಾಗುವಂತೆ ವಸ್ತ್ರಭಾಗ್ಯ ನೀಡೋ ಘೋಷಣೆ
ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ನೀಡಲು ತಿರ್ಮಾನ ಸಾಧ್ಯತೆ
ಇಂದಿರಾ ಕ್ಯಾಂಟಿನ್ ದದಯೋಜನೆ ಎಲ್ಲಾ ತಾಲೂಕು ಕೇಂದ್ರಗಳಿಗೆ ವಿಸ್ತರಣೆ
ತಮಿಳುನಾಡು ಮಾದರಿಯಲ್ಲಿ ಜನಪ್ರಿಯ ಘೋಷಣೆಗಳತ್ತ ಸಿದ್ಧರಾಮಯ್ಯ ಚಿತ್ತ
ವಿದ್ಯಾಸಿರಿ, ಭಾಗ್ಯಲಕ್ಷ್ಮೀ ಯೋಜನೆಯ ಮೊತ್ತ ಹೆಚ್ಚಳ ಮಾಡುವ ಘೋಷಣೆ
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡುವ ಸಾಲದ ಮೊತ್ತದಲ್ಲಿ ಹೆಚ್ಚಳ

‘ಟೆಂಪಲ್ ರನ್’​ ನೆನಪು..
ಚುನಾವಣೆ ದೃಷ್ಟಿಯಿಂದ ಮಠಗಳ ಮೇಲೆ ಪ್ರೀತಿ ತೋರಿಸಲಿದ್ದಾರೆ. 
ಮೇಲ್ವರ್ಗದ ಮಠಗಳಿಗೂ ಅನುದಾನ ನೀಡಲು ಮುಂದಾಗುವ ಸಾಧ್ಯತೆ 
ಮತಗಳಿಕೆ ಹಿನ್ನೆಲೆಯಲ್ಲಿ ಟೆಂಪಲ್ ರನ್ ನೆನಪು ಮಾಡಿಕೊಳ್ಳಲಿರುವ ಸಿಎಂ.
ಹಿಂದುಳಿದ ಮಠಗಳ ಜೊತೆಗೆ ಸಾಮಾಜಿಕ ಸಂಘಟನೆಗಳಿಗೂ ಹೆಚ್ಚಿನ ಅನುದಾನ

ಮಹಿಳೆಯರಿಗೆ ಏನು..?
ಮಹಿಳೆಯರತ್ತ ದೃಷ್ಟಿ ಹರಿಸಿ ಹಲವು ಘೋಷಣೆ ಮಾಡಲಿರುವ ಸಿಎಂ
ಸ್ವಸಹಾಯ ಸಂಘಗಳಿಗೆ ಹೆಚ್ಚಿನ ಸಾಲದ ಮೊತ್ತ ನಿಗದಿ ಮಾಡಲಿರುವ ಸಿಎಂ
ಉದ್ಯೋಗ ಸೃಷ್ಟಿ ಯೋಜನೆಗಳನ್ನು ರೂಪಿಸುವ ಯೋಜನೆ ಪ್ರಕಟ ಸಾಧ್ಯತೆ
 

loader