ಈ ಬಜೆಟ್’ನಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಿಕ್ಕ ಕೊಡುಗೆಗಳಿವು

First Published 16, Feb 2018, 12:38 PM IST
Karnataka budget 2018
Highlights

ಸಿಎಂ ಸಿದ್ದರಾಮಯ್ಯ ಇಂದು ಮಂಡಿಸಿದ ಬಜೆಟ್’ನಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಿಕ್ಕ ಅನುದಾನಗಳಿವು. 

ಬೆಂಗಳೂರು (ಫೆ.16): ಸಿಎಂ ಸಿದ್ದರಾಮಯ್ಯ ಇಂದು ಮಂಡಿಸಿದ ಬಜೆಟ್’ನಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಿಕ್ಕ ಅನುದಾನಗಳಿವು. 

* ವೈದ್ಯಕೀಯ ಶಿಕ್ಷಣಕ್ಕೆ 2177 ಕೋಟಿ ರೂ. ಅನುದಾನ ಮೀಸಲು

* ಬೆಂಗಳೂರಿನಲ್ಲಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ 1000 ಹಾಸಿಗೆ ಹೆಚ್ಚುವರಿ ವಾರ್ಡ್ ಸ್ಥಾಪನೆ.

* ಗದಗ, ಕೊಪ್ಪಳ ಮತ್ತು ಚಾಮರಾಜನಗರಗಳಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ತಲಾ 100 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ

* ಶಿವಮೊಗ್ಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 7.81 ಕೋಟಿ ವೆಚ್ಚದಲ್ಲಿ ಹೃದ್ರೋಗ ಚಿಕಿತ್ಸಾ ಸೌಲಭ್ಯ.

* ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಗೆ 15 ಕೋಟಿ ವೆಚ್ಚದಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯ.

* ಮೈಸೂರಿನ ಶುಶ್ರೂಶಾ ಕಾಲೇಜಿಗೆ 30 ಕೋಟಿ ರೂ.

* ಬೀದರ್ ಮತ್ತು ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳಿಗೆ ತಲಾ 15 ಕೋಟಿ ವೆಚ್ಚದಲ್ಲಿ ಹೃದ್ರೋಗ ಚಿಕಿತ್ಸಾ ಘಟಕ.

* ಹಾಸನ, ಮೈಸೂರು ಮತ್ತು ಕಾರವಾರ ವೈದ್ಯಕೀಯ ಕಾಲೇಜುಗಳಿಗೆ ತಲಾ 15 ಕೋಟಿ ರೂ.ವೆಚ್ಚದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ.

* 30 ಕೋಟಿ ರೂ. ವೆಚ್ಚದಲ್ಲಿ ಶಶ್ರೂಶಾ ಶಾಲಾ, ಕಾಲೇಜುಗಳು ಮೇಲ್ದರ್ಜೆಗೆ.

loader