ತೃತೀಯ ರಂಗಕ್ಕೆ ಸಡ್ಡು ಹೊಡೆಯಲು ಅಖಾಡಕ್ಕಿಳಿದಿದೆ ರಾಜ್ಯ ಬಿಜೆಪಿ

Karnataka BJP Prepare for Loksabha election 2019
Highlights

ವಿಧಾನಸಭೆ ಚುನಾವಣೆ ಮುಕ್ತಾಯವಾದ ಕೂಡಲೇ ಲೋಕಸಭೆಗೆ ಸಿದ್ಧವಾಗಿದೆ ರಾಜ್ಯ ಬಿಜೆಪಿ.  ಬಿಜೆಪಿ ನಾಯಕರು ಲೋಕಸಭೆ ಚುನಾವಣೆಗೆ ವರ್ಷಕ್ಕೂ ಮೊದಲೇ  ತೃತೀಯ ರಂಗಕ್ಕೆ ಕರ್ನಾಟಕದಿಂದಲೇ ತಿರುಗೇಟು ನೀಡಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ನಡೆಸಿದೆ. 

ಬೆಂಗಳೂರು (ಜೂ. 04): ವಿಧಾನಸಭೆ ಚುನಾವಣೆ ಮುಕ್ತಾಯವಾದ ಕೂಡಲೇ ಲೋಕಸಭೆಗೆ ಸಿದ್ಧವಾಗಿದೆ ರಾಜ್ಯ ಬಿಜೆಪಿ.  ಬಿಜೆಪಿ ನಾಯಕರು ಲೋಕಸಭೆ ಚುನಾವಣೆಗೆ ವರ್ಷಕ್ಕೂ ಮೊದಲೇ  ತೃತೀಯ ರಂಗಕ್ಕೆ ಕರ್ನಾಟಕದಿಂದಲೇ ತಿರುಗೇಟು ನೀಡಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ನಡೆಸಿದೆ. 

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದು ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಲು  ರಾಜ್ಯ ಬಿಜೆಪಿ ಮುಂದಾಗಿದೆ.  ಕೇಂದ್ರ ಸರ್ಕಾರದ ನಾಲ್ಕು ವರ್ಷಗಳ ಸಾಧನೆಗಳನ್ನು 9 ಮಾರ್ಗಗಳ ಮೂಲಕ ಜನರಿಗೆ ಮುಟ್ಟಿಸಲು ನಿರ್ಧಾರ ಮಾಡಿದೆ.  ಇದಕ್ಕೆಂದೆ 9 ವಿಭಾಗಗಳನ್ನು ರಚಿಸಿ ಸಂಚಾಲಕರು ಮತ್ತು ಸಹಸಂಚಾಲಕರನ್ನು ನೇಮಕ ಮಾಡಲಾಗಿದೆ.  ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಬಿಜೆಪಿ ರಚಿಸಿರುವ  9 ವಿಭಾಗಗಳಿವು. 

1. ಜಿಲ್ಲಾವಾರು ಸುದ್ದಿಗೋಷ್ಠಿಗಳನ್ನು ನಡೆಸುವುದು..
2. ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಒಂದೂಗೂಡಿಸಿ ಸಭೆ ನಡೆಸುವುದು.

3. ರಾಜ್ಯದ ಚಿಂತಕರನ್ನು ಸಂಪರ್ಕಿಸಿ ಸಭೆ ನಡೆಸುವುದು..
4. ರಾಜ್ಯದ ಗಣ್ಯರನ್ನು ಸಂಪರ್ಕಿಸಿ ವಿಶ್ವಾಸ ಮೂಡಿಸುವುದು..
5. ಗ್ರಾಮ ಸಭೆಗಳನ್ನು ನಡೆಸಿ ಗ್ರಾಮೀಣ ಪ್ರದೇಶಗಳಲ್ಲಿ ಮೋದಿ ವರ್ಚಸ್ಸು ಹೆಚ್ಚಿಸುವುದು..
6. ಕೊಳಚೆ ಪ್ರದೇಶಗಳಲ್ಲಿ  ಸ್ವಚ್ಛತಾ ಅಭಿಯಾನ ಕಾರ್ಯ ಹಮ್ಮಿಕೊಂಡು ಕೇಂದ್ರದ ಸ್ವಚ್ಛ ಭಾರತ್ ಯೋಜನೆ ಕಲ್ಪನೆ ಜಾಗೃತಿಗೊಳಿಸುವುದು..
7. ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಬೈಕ್ ರ್ಯಾಲಿ ನಡೆಸಿ ಮೋದಿ ಸಾಧನೆ ಬಿಂಬಿಸುವುದು..
8. ಹಿರಿಯ ನಾಗರಿಕರ ಸಭೆ ನಡೆಸಿ ಜನರಿಗೆ ವಿಷಯ ತಲುಪಿಸಲು ನಿರ್ಧಾರ..
9. ಕೇಂದ್ರ ನಾಯಕರ ಕಾರ್ಯಕ್ರಮ ಜೋಡಣೆ.

 

loader