ಬೆಂಗಳೂರು, [ಜೂನ್.05]: ಲೋಕಸಭಾ ಚುನಾವಣೆಯಲ್ಲಿ ಅಭೂತ ಪೂರ್ವ ಗೆಲುವು ಸಿಕ್ಕಿರುವುದಕ್ಕೆ  ರಾಜ್ಯ ಬಿಜೆಪಿ ತನ್ನ ಕಾರ್ಯಕರ್ತರಿಗೆ ಕೃತಜ್ಞತ ಸಮರ್ಪಣೆ ಸಲ್ಲಿಸಿತು.

ಇಂದು [ಬುಧವಾರ] ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವುದರ ಜತೆಗೆ ನೂತನ ಸಂಸದರಿಗೆ ಸನ್ಮಾನಿಸಲಾಯಿತು. 

ಬಳಿಕ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪಕ್ಷದ ಕಚೇರಿ ಜಗನಾಥ್ ಭವನದಲ್ಲಿ ಶಾಸಕಾಂಗ ಸಭೆ ನಡೆಯಿತು. ಸಭೆಯಲ್ಲಿ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆಗಳು ನಡೆದಿವೆ.

ಅದರಲ್ಲೂ ಮುಖ್ಯವಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸವುದರ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ - ಜೆಡಿಎಸ್ ನಾಯಕರ ಕಚ್ಚಾಟದಿಂದ ಸರ್ಕಾರ ಪತನ ಆಗೋದು ನಿಶ್ಚಿತವಾಗಿದ್ದು, ನಮ್ಮ ಸರ್ಕಾರ ಖಂಡಿತ ರಚನೆ ಆಗಲಿದೆ ಎಂದು ಯಡಿಯೂರಪ್ಪ ತಮ್ಮ ಶಾಸಕರಿಗೆ ಭರವಸೆ ಮೂಡಿಸಿದ್ದಾರೆ.

ನಾವಾಗಿ ಸರ್ಕಾರ ಕೆಡವುದು ಬೇಡ. ಅವರವರೆ ಕಚ್ಚಾಡಿ ಸರ್ಕಾರ ಅಂತ್ಯವಾಗಲಿದೆ. ಅಲ್ಲಿ ತನಕ ನಾವು ಕಾಯೋಣ ಎಂದು ಶಾಸಕರಿಗೆ ಯಿಡಿಯೂರಪ್ಪ ಕಿವಿ ಮಾತು ಹೇಳಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.