Asianet Suvarna News Asianet Suvarna News

ಇನ್ನು 2-3 ವಾರದಲ್ಲಿ ರಾಜ್ಯ ಚುನಾವಣೆ ದಿನಾಂಕ ಪ್ರಕಟ?

ರಾಜ್ಯ ವಿಧಾನಸಭೆಯ ಚುನಾವಣಾ ವೇಳಾಪಟ್ಟಿಇದೇ ತಿಂಗಳ ಅಂತ್ಯದಲ್ಲಿ ಅಥವಾ ಬರುವ ಏಪ್ರಿಲ್‌ ಮೊದಲ ವಾರದಲ್ಲಿ ಪ್ರಕಟಗೊಳ್ಳಲಿದೆ.

Karnataka Assembly Election Date Fix

ಬೆಂಗಳೂರು : ರಾಜ್ಯ ವಿಧಾನಸಭೆಯ ಚುನಾವಣಾ ವೇಳಾಪಟ್ಟಿಇದೇ ತಿಂಗಳ ಅಂತ್ಯದಲ್ಲಿ ಅಥವಾ ಬರುವ ಏಪ್ರಿಲ್‌ ಮೊದಲ ವಾರದಲ್ಲಿ ಪ್ರಕಟಗೊಳ್ಳಲಿದೆ.

ಈಗಾಗಲೇ ಚುನಾವಣಾ ಆಯೋಗವು ಎಲ್ಲ ಸಿದ್ಧತೆಗಳನ್ನೂ ಕೈಗೊಂಡಿದ್ದು, ಚುನಾವಣೆ ಎದುರಿಸಲು ರಾಜ್ಯ ಚುನಾವಣಾಧಿಕಾರಿಗಳ ಕಚೇರಿ ಸಜ್ಜಾಗಿದೆ. ಎರಡು ಅಥವಾ ಮೂರು ವಾರಗಳಲ್ಲಿ ವೇಳಾಪಟ್ಟಿಪ್ರಕಟಿಸಲಾಗುವುದು. ಬಹುತೇಕ ಮೇ ಮೊದಲ ವಾರದಲ್ಲಿ ಚುನಾವಣೆ ನಿಗದಿಯಾಗಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.

‘ನಾವು ಚುನಾವಣೆ ನಡೆಸಲು ಬೇಕಾದ ಎಲ್ಲ ಸಿದ್ಧತೆಗಳನ್ನೂ ಕೈಗೊಳ್ಳುತ್ತಿದ್ದು, ಅಂತಿಮ ಹಂತದಲ್ಲಿದ್ದೇವೆ. ಚುನಾವಣೆ ಎದುರಿಸಲು ಸಕಲ ರೀತಿಯಲ್ಲಿ ಸಜ್ಜಾಗಿದ್ದೇವೆ. ಆದರೆ, ಚುನಾವಣೆಯ ವೇಳಾಪಟ್ಟಿನಿರ್ಧರಿಸುವುದು ಕೇಂದ್ರ ಚುನಾವಣಾ ಆಯೋಗ. ಬಹುತೇಕ ಈ ತಿಂಗಳ ಅಂತ್ಯದಲ್ಲಿ ಅಥವಾ ಏಪ್ರಿಲ್‌ ಮೊದಲ ವಾರ ವೇಳಾಪಟ್ಟಿಘೋಷಣೆಯಾಗಬಹುದು ಎಂಬ ಮಾಹಿತಿಯಿದೆಯಾದರೂ ಖಚಿತವಾಗಿಲ್ಲ’ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯ ರಾಷ್ಟ್ರೀಯ ನಾಯಕರೂ ರಾಜ್ಯಕ್ಕೆ ದಾಂಗುಡಿ ಇಡುತ್ತಿದ್ದು, ವೇಳಾಪಟ್ಟಿಪ್ರಕಟಗೊಳ್ಳುತ್ತಿದ್ದಂತೆಯೇ ಅಭ್ಯರ್ಥಿಗಳ ಪಟ್ಟಿಅಂತಿಮಗೊಂಡು ಪ್ರಚಾರದ ಕಾವು ಜೋರಾಗಲಿದೆ. ಬೇಸಿಗೆಯ ಬಿರು ಬಿಸಿಲಿನ ನಡುವೆ ಚುನಾವಣೆ ಮತ್ತಷ್ಟುಕಾವು ಏರಿಸುವುದರಲ್ಲಿ ಅನುಮಾನವಿಲ್ಲ.

Follow Us:
Download App:
  • android
  • ios