ಕರ್ನಾಟಕದಲ್ಲಿ ಗೆಲ್ಲಲು ಬಿಜೆಪಿಗೆ ಸಿಕ್ಕಿದೆ ಹೊಸ ಅಸ್ತ್ರ

Karnataka Assembly Election BJP Use New Technique
Highlights

ಕೇಂದ್ರ ಸರ್ಕಾರ ಇತ್ತೀಚಿನ ಬಜೆಟ್‌ನಲ್ಲಿ ಬಡ ಕುಟುಂಬಗಳ ಆರೋಗ್ಯ ವಿಮೆಗೆ ನೀಡಿದ ಒತ್ತು , ಕೃಷಿಕರಿಗೆ ನೀಡಿದ ಬಂಪರ್ ಸವಲತ್ತು ಸೇರಿದಂತೆ ಹಲವು ಯೋಜನೆಗಳು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಹಕಾರಿ ಯಾಗಲಿದೆ ಎಂದು ಬಿಜೆಪಿ ಪ್ರತಿಪಾದಿಸಿದೆ.

ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚಿನ ಬಜೆಟ್‌ನಲ್ಲಿ ಬಡ ಕುಟುಂಬಗಳ ಆರೋಗ್ಯ ವಿಮೆಗೆ ನೀಡಿದ ಒತ್ತು , ಕೃಷಿಕರಿಗೆ ನೀಡಿದ ಬಂಪರ್ ಸವಲತ್ತು ಸೇರಿದಂತೆ ಹಲವು ಯೋಜನೆಗಳು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಹಕಾರಿ ಯಾಗಲಿದೆ ಎಂದು ಬಿಜೆಪಿ ಪ್ರತಿಪಾದಿಸಿದೆ.

ಬಜೆಟ್‌ನಲ್ಲಿ ಜೇಟ್ಲಿ ಬಡವರ ಪರ ಮತ್ತು ರೈತರ ಪರವಾಗಿ ಹಲವು ಯೋಜನೆ ಘೋಷಿಸಿದ್ದಾರೆ. ಅವುಗಳನ್ನು ಜನಸಾಮಾನ್ಯ ರಿಗೆ ತಲುಪಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಪಕ್ಷದ ಹಿರಿಯ ಮುಖಂಡರು ಬಿಜೆಪಿ ಮುಖಂಡರಿಗೆ ಸೂಚನೆ ನೀಡಿದ್ದಾರೆ.

ಇತ್ತೀಚೆಗಷ್ಟೇ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಜಯ ಸಾಧಿಸಿ ಬಿಜೆಪಿ ಅಧಿಕಾರ ಹಿಡಿದಿದೆಯಾದರೂ, ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಸ್ಥಾನಗಳು ಬಂದಿಲ್ಲ. ಅಲ್ಲದೆ, ರಾಜಸ್ಥಾನದಲ್ಲಿ ನಡೆದ ಮೂರು ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ ಎದುರು ಹೀನಾಯ ಸೋಲುಂಡಿದೆ.

ಹೀಗಾಗಿ ಬಜೆಟ್ ಘೋಷಣೆಗಳನ್ನು ಜನರಿಗೆ ಮುಟ್ಟಿಸಿ ಗೆಲುವಿಗೆ ಯತ್ನಿಸಿ ಎಂಬ ಸಂದೇಶವನ್ನು ಪಕ್ಷದ ನಾಯಕರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿದೆ.

loader