ಬಿಜೆಪಿ ಇದೇ ಮೊದಲ ಬಾರಿಗೆ ಅಪ್ಪ ಮಕ್ಕಳಿಗೂ ಟಿಕೆಟ್ ನೀಡಿದೆ
ಬೆಂಗಳೂರು : ಬಿಜೆಪಿ ಇದೇ ಮೊದಲ ಬಾರಿಗೆ ಅಪ್ಪ ಮಕ್ಕಳಿಗೂ ಟಿಕೆಟ್ ನೀಡಿದೆ. ಗೋವಿಂದರಾಜ ನಗರದಿಂದ ಕಣಕ್ಕಿಳಿದಿರುವ ಮಾಜಿ ಸಚಿವ ವಿ. ಸೋಮಣ್ಣ ಪುತ್ರ ಡಾ.ಅರುಣ್ ಅವರಿಗೆ ಹಾಸನ ಜಿಲ್ಲೆ ಅರಸೀಕೆರೆ ಟಿಕೆಟ್ ನೀಡಲಾಗಿದೆ. ಬಾಗಲಕೋಟೆ ಜಿಲ್ಲೆ ಮುಧೋಳದಿಂದ ಸ್ಪರ್ಧಿಸುತ್ತಿರುವ ಮಾಜಿ ಗೋವಿಂದ ಕಾರಜೋಳ ಅವರ ಪುತ್ರ ಡಾ.ಗೋಪಾಲ್‌ಗೆ ಅವಕಾಶ ಕಲ್ಪಿಸಲಾಗಿದೆ.
ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಕೆಜಿಎಫ್ ಕ್ಷೇತ್ರದಿಂದ ಹಾಲಿ ಶಾಸಕಿ ರಾಮಕ್ಕ ಬದಲು ಪುತ್ರ ಹಾಗೂ ಮಾಜಿ ಶಾಸಕ ವೈ.ಸಂಪಂಗಿ ಅವರಿಗೆ ಘೋಷಿಸಲಾಗಿತ್ತು. ಆದರೆ, ಇದೀಗ ಮೂರನೇ ಪಟ್ಟಿಯಲ್ಲಿ ಸಂಪಂಗಿ ಬದಲು ಅವರ ಮಗಳು ಅಶ್ವಿನಿ ಅವರಿಗೆ ಟಿಕೆಟ್ ನೀಡಲಾಗಿದೆ. ಗೆಲ್ಲುವ ಮಾನದಂಡ ಆಧರಿಸಿ ಸಂಪಂಗಿ ಕೋರಿಕೆ ಮೇರೆಗೆ ಟಿಕೆಟ್ ಬದಲಾಯಿಸ ಲಾಗಿದೆ ಎಂದು ತಿಳಿದು ಬಂದಿದೆ.

Last Updated 21, Apr 2018, 7:43 AM IST