ಇಂದು ಜಯನಗರ ಕ್ಷೇತ್ರದ ಚುನಾವಣೆ

Karnataka Assembly Elec tion 2018 : Jayanagara Assembly Election
Highlights

ಮಾಜಿ ಶಾಸಕ ಬಿ.ಎನ್ ವಿಜಯ್ ಕುಮಾರ್ ಅಕಾಲಿಕ ಮರಣದಿಂದಾಗಿ ಮಂದೂಡಲಾಗಿದ್ದ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಇಂದು ಮತದಾನ ನಡೆಯುತ್ತಿದೆ. 

ಬೆಂಗಳೂರು :  ಮಾಜಿ ಶಾಸಕ ಬಿ.ಎನ್ ವಿಜಯ್ ಕುಮಾರ್ ಅಕಾಲಿಕ ಮರಣದಿಂದಾಗಿ ಮಂದೂಡಲಾಗಿದ್ದ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಇಂದು ಮತದಾನ ನಡೆಯುತ್ತಿದೆ. ಕ್ಷೇತ್ರದಲ್ಲಿ 216 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಒಟ್ಟು 2,03,184 ಮತದಾರರು ಹಕ್ಕು ಚಲಾಯಿಸಲಿದ್ದಾರೆ.  

ಬೆಳಗ್ಗೆ 7ರಿಂದ ಸಂಜೆ 6ಗಂಟೆ ವರೆಗೆ ಮತದಾನಕ್ಕೆ ಆಯೋಗ ಅವಕಾಶ ನೀಡಲಾಗಿದ್ದು, ಚುನಾವಣಾ ಕರ್ತವ್ಯಕ್ಕಾಗಿ 1400 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.  5 ವಿಶೇಷ ಪಿಂಕ್ ಬೂತ್‌ಗಳ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.

ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆಗಳಾಗದಂತೆ ರಾಜ್ಯ ಪೊಲೀಸ್ ಹಾಗೂ ಅರೆ ಸೇನಾ ಪಡೆಗಳ ಕಾವಲು ಹಾಕಲಾಗಿದೆ. ಕ್ಷೇತ್ರದಾದ್ಯಂತ ಫ್ಲೈಯಿಂಗ್, ಸಿಟ್ಟಿಂಗ್ ಹಾಗೂ ಮೊಬೈಲ್ ಸ್ಕ್ವಾಡ್‌ಗಳನ್ನು ನೇಮಿಸಲಾಗಿದೆದ್ದು ಜೂನ್ 13ರಂದು ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

loader