ಬೆಳಗಾವಿ ಸಂಸದ ಸುರೇಶ್ ಅಂಗಡಿ ವಿರುದ್ಧ ಭಾರೀ ಆಕ್ರೋಶ ಎದುರಾಗಿದೆ. ಅಲ್ಲದೇ  ರಾಜೀನಾಮೆ ನೀಡಬೇಕೆಂದು ಆಗ್ರಹಿಸಲಾಗಿದೆ.

ಬೆಳಗಾವಿ [ಜೂ.19] : ಲೋಕಸಭೆಯಲ್ಲಿ ಪ್ರಮಾಣ ವಚನದ ವೇಳೆ ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಸುರೇಶ್ ಅಂಗಡಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ವಿರುದ್ದ ನೂರಾರು ಕರವೆ ಕಾರ್ಯಕರ್ತರಿಂದ ಅವರ ವಿರುದ್ಧ ಪ್ರತಿಭಟನೆ ನಡೆದಿದೆ. 

ಇನ್ನು ಪ್ರತಿಭಟನೆ ವೇಳೆ ಕನ್ನಡ ವಿರೋಧಿ ಸುರೇಶ್ ಅಂಗಡಿ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೇ ಬೆಳಗಾವಿಯಲ್ಲಿರುವ ಸುರೇಶ್ ಅಂಗಡಿ ಅವರ ಮನೆಗೂ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಯತ್ನಿಸಿದ್ದು, ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ತಡೆದಿದ್ದಾರೆ.