ರಾಮೇಶ್ವರಂ(ಸೆ.12): ಕಾವೇರಿ ವಿಚಾರವಾಗಿ ತಮಿಳುನಾಡಿನಲ್ಲಿ ಪುಂಡಾಟ ಮುಂದುವರೆದಿದೆ. ತಮಿಳುನಾಡಿನ ಹಲವೆಡೆ ಕನ್ನಡಿಗರನ್ನು ಟಾರ್ಗೆಟ್ ಮಾಡಲಾಗಿದೆ.

ಕನ್ನಡಿಗರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ರಾಮೇಶ್ವರಂನಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಸಲಾಗಿದೆ.

‘ಕಾವೇರಿ ತಮಿಳುರದು ಅಂತಾ ಹೇಳು ಎಂದು ಮನಬಂದಂತೆ ಥಳಿಸಿದ್ದಾರೆ. ‘ಟಿಪಿಡಿಕೆ’ ಎಂಬ ಸಂಘಟನೆ ಕಾರ್ಯಕರ್ತರು ಈ ಪುಂಡಾಟಿಕೆ ಮುಂದುವರೆಸಿದ್ದು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.