ರಾಜ್ಯದಲ್ಲಿ ಲಿಂಗಾಯತ, ವೀರಶೈವ ಧರ್ಮದ ಗದ್ದಲ ಜೋರಾಗಿದೆ. ರಾಜಕೀಯ ನಾಯಕರು ನಾ ಮುಂದು ತಾ ಮುಂದು ಅಂತ ಸಮಾವೇಶ ಮಾಡುತ್ತಿದ್ದಾರೆ. ಆದ್ರೆ ಗೋವಾದಲ್ಲಿ ಕನ್ನಡಿಗರ ಸಮೇತ ಬಸವೇಶ್ವರ ದೇಗುಲ ಕೂಡಾ ಧ್ವಂಸವಾಗಿದೆ. ನಮ್ಮ ರಾಜ್ಯದಲ್ಲಿರುವ ನಾಯಕರು ಅವರ ಪರ ನಿಲ್ಲಬೇಕಿತ್ತು. ಆದ್ರೆ ಅವರದ್ದೇ ಧರ್ಮಯುದ್ಧದಲ್ಲಿ ತಲ್ಲಿನರಾಗಿದ್ದಾರೆ. ಇದು ನಮ ರಾಜ್ಯದ ಲಿಂಗಾಯತ ಮತ್ತು ವೀರಶೈವರನ್ನು ಕೆರಳಿಸಿದೆ.

ಗೋವಾ(ಸೆ.29): ರಾಜ್ಯದಲ್ಲಿ ಲಿಂಗಾಯತ, ವೀರಶೈವ ಧರ್ಮದ ಗದ್ದಲ ಜೋರಾಗಿದೆ. ರಾಜಕೀಯ ನಾಯಕರು ನಾ ಮುಂದು ತಾ ಮುಂದು ಅಂತ ಸಮಾವೇಶ ಮಾಡುತ್ತಿದ್ದಾರೆ. ಆದ್ರೆ ಗೋವಾದಲ್ಲಿ ಕನ್ನಡಿಗರ ಸಮೇತ ಬಸವೇಶ್ವರ ದೇಗುಲ ಕೂಡಾ ಧ್ವಂಸವಾಗಿದೆ. ನಮ್ಮ ರಾಜ್ಯದಲ್ಲಿರುವ ನಾಯಕರು ಅವರ ಪರ ನಿಲ್ಲಬೇಕಿತ್ತು. ಆದ್ರೆ ಅವರದ್ದೇ ಧರ್ಮಯುದ್ಧದಲ್ಲಿ ತಲ್ಲಿನರಾಗಿದ್ದಾರೆ. ಇದು ನಮ ರಾಜ್ಯದ ಲಿಂಗಾಯತ ಮತ್ತು ವೀರಶೈವರನ್ನು ಕೆರಳಿಸಿದೆ.

ತೆಪ್ಪಗಿದ್ದಾರೆ ರಾಜ್ಯದ ಲಿಂಗಾಯತ-ವೀರಶೈವ ನಾಯಕರು 

ಗೋವಾದ ಬೈನಾ ಬೀಚ್​ನಲ್ಲಿ ಸುಮಾರು 40 ವರ್ಷಗಳಿಂದ ನೆಲೆಸಿದ್ದ ಕನ್ನಡಿಗರ ಮನೆಗಳನ್ನು ಗೋವಾ ಸರ್ಕಾರ ಏಕಾಏಕಿ ನೆಲಸಮಗೊಳಿಸಿದೆ. 500ಕ್ಕೂ ಹೆಚ್ಚು ಕನ್ನಡಿಗರು ಬೀದಿಗೆ ಬಿದ್ದಿದ್ದಾರೆ. ಬರೀ ಜನರು ಮಾತ್ರವಲ್ಲ. ದುರ್ಗಾದೇವಿ ದೇಗುಲ ಹಾಗೂ ಬಸವೇಶ್ವರ ದೇಗುಲವನ್ನೂ ಕೆಡವಿಹಾಕಿದ್ದಾರೆ. ಗೋವಾದಲ್ಲಿರೋ ಲಿಂಗಾಯತರು ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭದ ಜೊತೆ ಈ ನೋವನ್ನ ತೋಡಿಕೊಂಡಿದ್ದಾರೆ..

ಗೋವಾದ ಕನ್ನಡಿಗರ ಪರ ಮಿಡಿಯುತ್ತಿಲ್ಲ ರಾಜ್ಯದ ನಾಯಕರು

ದುರಂತ ಅಂದ್ರೆ ಗೋವಾದಲ್ಲಿನ ಕನ್ನಡಿಗರ ಪರ ನಮ್ಮ ರಾಜ್ಯ ನಿಲ್ಲಬೇಕಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಸೇರಿ ಹಲವು ರಾಜಕೀಯ ಮುಖಂಡರು ಮಾತಿನಲ್ಲಿ ಟೀಕೆ ಮಾಡ್ತಿದ್ದಾರೆ. ಹೊರತಾಗಿ ಗೋವಾ ಕನ್ನಡಿಗರ ರಕ್ಷಣೆ ಗೋಜಿಗೇ ಹೋಗ್ತಿಲ್ಲ. ಬೈನಾ ಬೀಚ್​ನಲ್ಲಿನ 55 ಮನೆಗಳ ತೆರವುಗೊಳಿಸುವಂತೆ ಸರ್ಕಾರ ನೋಟಿಸ್​ ನೀಡಿತ್ತು. ಆದ್ರೆ ದೇವಾಲಯವನ್ನು ಯಾವುದೇ ನೋಟಿಸ್ ನೀಡದೆ ಏಕಾಏಕಿ ಜೆಸಿಬಿ ನುಗ್ಗಿಸಿ ಕೆಡವಲಾಗಿದೆ. ಹೀಗಾಗಿ ಭಗ್ನಗೊಂಡ ಹನುಮಾನ್​ ಪ್ರತಿಮೆ, ಲಿಂಗ, ನಂದಿ, ಬಸವೇಶ್ವರ ಪ್ರತಿಮೆಗೆ ಭಕ್ತರು ಬೀದಿಯಲ್ಲಿ ಪೂಜಿಸುತ್ತಿದ್ದಾರೆ.

ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ದೊಡ್ಡ ಯುದ್ಧವೇ ನಡೀತಿದೆ. ಗೋವಾದಲ್ಲಿ ಬಸವೇಶ್ವರ ದೇಗುಲ ಧ್ವಂಸಗೊಂಡರೂ ಕರ್ನಾಟಕದ ಯಾವುದೇ ರಾಜಕೀಯ, ಧಾರ್ಮಿಕ ಮುಖಂಡರಾಗಲಿ ದನಿ ಎತ್ತುತ್ತಿಲ್ಲ. ಬರೀ ಬಾಯಿ ಮಾತಿನ ಅನುಕಂಪ ತೋರಿಸ್ತಿದ್ದಾರೆ. ಇದು ಗೋವಾದ ಲಿಂಗಾಯತ - ವೀರಶೈವರನ್ನು ಕೆರಳಿಸಿದೆ.